ಬಿಗ್ ಬಾಸ್ ಮನೆಯಲ್ಲಿ ಚಂದನ್ ಗೆ ಲವ್ ಸಿಗ್ನಲ್ ಸಿಕ್ತಿದ್ಯಂತೆ!

30 Oct 2017 11:57 AM | Entertainment
412 Report

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಚಂದನ್ ಗೆ ಲವ್ ಆಗುವ ಸೂಚನೆಯಿದೆ ಎಂದು ಸ್ಪರ್ಧಿಗಳಾದ ಜಗನ್ ಹಾಗೂ ಆಶಿತಾ ಎದುರು ಹೇಳಿಕೊಂಡಿದ್ದಾರೆ.

ಹೌದು, ನಿನ್ನೆ ಮಧ‍್ಯರಾತ್ರಿ 12.30 ಕ್ಕೆ ಮಾತುಕತೆ ಶುರುಮಾಡಿದ ಚಂದನ್ ಜಗನ್ ಹಾಗೂ ಆಶಿತ ಬಳಿ ತಮ್ಮ ಲವ್ ವಿಚಾರದ ಕುರಿತು ಹೇಳಿದ್ದಾರೆ. ಇದಕ್ಕೆ ನಗುತ್ತಲ್ಲೇ ಪ್ರತಿಕ್ರೀಯಿಸಿದ ಅವರು, ನಿವೇದಿತಾ ಗೌಡರ ಹೆಸರು ಹೇಳಿದ್ರು, ಆದರೆ ಇದನ್ನು ತಿರಸ್ಕರಿಸಿದರು.

ಇನ್ನು ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಯಲ್ಲಿ ಸುದೀಪ್ ಮನೆಯಲ್ಲಿ ನಡೆಯುತ್ತಿರುವ ಸೂಕ್ಷ್ಮ ವಿಚಾರಗಳನ್ನು ಪರೋಕ್ಷವಾಗಿ ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೇವಲ ಎರಡೇ ವಾರದಲ್ಲಿ ಲವ ಸಿಗ್ನಲ್ ಗಳು ಸಿಗುತ್ತೀವೆ ಎಂದು ಸುದೀಪ್ ಜೆಕೆ ಮತ್ತು ಜಗನ್ ಅವರ ಕಾಲೆಳೆದಿದ್ದರು. ಚಂದನ್ ತಮಗೆ ಲವ್ ಸಿಗ್ನಲ್ ಸಿಕ್ಕಿದ್ದು, ಆದರೆ ತಾವು ಯಾವ ಹುಡುಗಿಯನ್ನು ಲವ್ ಮಾಡುತ್ತಿದ್ದಾರೆ ಎಂಬುದನ್ನು ಹೇಳಿಲ್ಲ.

Edited By

Shruthi G

Reported By

Shruthi G

Comments