ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್

ನೈತಿಕತೆ ಬಗ್ಗೆ ಮಾತನಾಡಿದ ದಯಾಳ್ ಪದ್ಮನಾಭನ್, ಟಾಸ್ಕ್ ನಲ್ಲಿ 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನ ಶಿಸ್ತು ಬದ್ಧವಾಗಿ ಪಾಲಿಸಿದ್ದಾರಾ.? ತಮ್ಮ ಅನುಕೂಲಕ್ಕೆ ತಕ್ಕಂತೆ 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನು ಬದಲಾಯಿಸಿಕೊಂಡು.. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು.. ಎಲ್ಲ ಗಲಾಟೆಗಳಿಗೆ ಕಾರಣಕರ್ತರಾದ ಉಭಯ ತಂಡಗಳ ಕ್ಯಾಪ್ಟನ್ ದಯಾಳ್ ಪದ್ಮನಾಭನ್ ಹಾಗೂ ಶ್ರುತಿ ಪ್ರಕಾಶ್ ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ಮಾತಲ್ಲೇ ಪೆಟ್ಟು ಕೊಟ್ಟರು.
ಬಿಗ್ ಬಾಸ್' ಎನ್ನುವ ಒಂದು ರಿಯಾಲಿಟಿ ಶೋಗೆ ಎಲ್ಲರೂ ಬೇರೆಯದ್ದೇ ಅರ್ಥ ಕೊಟ್ಟಿದ್ದೀರಾ. 'ನನಗೆ ಬಿಗ್ ಬಾಸ್ ಮನೆಯಲ್ಲಿ ಮೋಸ ಆಗುತ್ತಿದೆ'. 'ಮನೆ ಇಬ್ಭಾಗ ಮಾಡಲು ಬಿಗ್ ಬಾಸ್ ಟಾಸ್ಕ್ ಕೊಡುತ್ತಾರೆ'. 'ಬೇರೆ ಏನೋ ಹೇಳಿ ಕರ್ಕೊಂಡು ಬಂದು, ನನ್ನನ್ನ ಇಲ್ಲಿ ಬಿಗ್ ಬಾಸ್ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ'.... ಇಂತಹ ಮಾತುಗಳು ತುಂಬಾ ಕೇಳಿಸಿತು. ಈ ಬಗ್ಗೆ ಎಲ್ಲರಿಗೂ ನಾನು ಹೇಳುವುದು ಏನಂದ್ರೆ, ''ತಾವು ತಾವಾಗಿ ಉಳಿದುಕೊಳ್ಳಬೇಕು ಅನ್ನೋದನ್ನ ಮಾತ್ರ ಬಿಗ್ ಬಾಸ್ ಅಪೇಕ್ಷೆ ಪಡುತ್ತಾರೆ. ತಾವು ತಾವಾಗಿ ಇಲ್ಲದೆ, ಕೂಗಾಡಿ, ಕಂಟೆಂಟ್ ಕೊಡಲಿ ಅಂತ ಯಾರೂ ಕಾಯುತ್ತಿಲ್ಲ'' ಎಂದು 'ಬಿಗ್ ಬಾಸ್' ಬಗ್ಗೆ ಆರೋಪ ಮಾಡಿದವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.
ನಿಯಮಗಳನ್ನು ಬದಲಾಯಿಸಿಕೊಂಡಿದ್ದು ಯಾಕೆ.? ''ಬಿಗ್ ಬಾಸ್' ಕೊಟ್ಟಿರುವ ಟಾಸ್ಕ್, ಅದರಲ್ಲಿ ನೀಡಿರುವ ನಿಯಮಗಳನ್ನು ಮೊದಲು ಎಲ್ಲರೂ ಸರಿಯಾಗಿ ಪಾಲಿಸಬೇಕು. ಆಟದ ನಿಯಮಗಳನ್ನು ತಾವು ತಾವೇ ಮೀಟಿಂಗ್ ಮಾಡಿ ಯಾಕೆ ಬದಲಾಯಿಸಿಕೊಂಡ್ರಿ.?'' ಎಂದು ಉಭಯ ತಂಡಗಳ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಯಾಳ್ ಪದ್ಮನಾಭನ್ ಗೆ ಸುದೀಪ್ ಪ್ರಶ್ನೆ ಮಾಡಿದರು. ಶ್ರುತಿ ಪ್ರಕಾಶ್ ಗೆ ಸುದೀಪ್ ಪ್ರಶ್ನೆ ''ಆಟಕ್ಕೆ ಬಿಗ್ ಬಾಸ್ ಒಂದು ನಿಯಮ ಕೊಟ್ಟಿದ್ರು. ತಾವು ತಮ್ಮ ನಿರ್ಧಾರಗಳನ್ನು ದಯಾಳ್ ಅವರಿಂದ ಪ್ರಭಾವಿತರಾಗಿ ತೆಗೆದುಕೊಳ್ಳುತ್ತಿದ್ರಿ ಅನ್ನೋದು ವೀಕ್ಷಕರ ಅಭಿಪ್ರಾಯ. ತಾವು-ದಯಾಳ್ ಕೂತು ಆಟದ ನಿಯಮಗಳನ್ನೇ ಬದಲಾಯಿಸಿದ್ರಿ'' ಎಂದು ಶ್ರುತಿ ಪ್ರಕಾಶ್ ಗೆ ಸುದೀಪ್ ನೇರವಾಗಿ ಪ್ರಶ್ನಿಸಿದರು.
Comments