ತೈಮೂರ್ ಅಲಿ ಖಾನ್ ಬರ್ತಡೇ ಹೇಗೆ ಮಾಡಲಾಗುತ್ತಿದೆ ಗೊತ್ತಾ
ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಪಡೆದಿದ್ದಾರೆ. ಕರೀನಾ ಪುತ್ರ ತೈಮೂರ್ ಎಲ್ಲೆ ಹೋದರು ಅಲ್ಲೊಂದು ಸುದ್ದಿ ಆಗೇ ಹೋಗಿರುತ್ತೆ.
ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಪಡೆದಿದ್ದಾರೆ. ಕರೀನಾ ಪುತ್ರ ತೈಮೂರ್ ಎಲ್ಲೆ ಹೋದರು ಅಲ್ಲೊಂದು ಸುದ್ದಿ ಆಗೇ ಹೋಗಿರುತ್ತೆ. ಅಷ್ಟರ ಮಟ್ಟಿಗೆ ಕ್ಯೂಟ್ ಆಗಿರೋ ತೈಮರ್ ಅಲಿ ಖಾನ್ ಗೆ ಬೇಕಾದಷ್ಟು ಅಭಿಮಾನಿಗಳಿದ್ದಾರೆ.
ನಟಿ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಏಕೈಕ ಪುತ್ರನಾಗಿರುವ ತೈಮೂರ್ ಗೆ ಈಗ ಒಂದು ವರ್ಷ ತುಂಬುತ್ತಿದೆ. ತೈಮೂರ್ ಖಾನ್ ಒಂದು ವರ್ಷದವನಾಗಲಿದ್ದಾರೆ. ಈ ಸಂದರ್ಭದಲ್ಲಿ ತೈಮೂರ್ ಅಲಿ ಖಾನ್ ಮೊದಲ ಬರ್ತಡೇ ಹೇಗೆಲ್ಲಾ ಇರಬಹುದು? ಬರ್ತಡೇ ಸೆಲೆಬ್ರೇಷನ್ ಎಲ್ಲಿ ಆಗುತ್ತೆ, ಯಾವ ರೀತಿ ಆಚರಿಸಬಹುದು ? ತೈಮೂರ್ ಹುಟ್ಟಹಬ್ಬದ ಆಚರಣೆಯಲ್ಲಿ ಯಾವ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.
ವೆಬ್ ಸೈಟ್ ಬಾಲಿವುಡ್ ಲೈಫ್ ವರದಿ ಪ್ರಕಾರ ಕರೀಷ್ಮಾ ಕಪೂರ್ ತೈಮೂರ್ ಬರ್ತಡೇ ಬಗ್ಗೆ ಹೇಳಿಕೊಂಡಿದ್ದಾರೆ. ತೈಮೂರ್ ಅಲಿ ಖಾನ್ ಬರ್ತಡೇ ಬಗ್ಗೆ ನಮಗೆಲ್ಲರಿಗೂ ತುಂಬಾ ಎಕ್ಸೈಟ್ ಮೆಂಟ್ ಇದೆ, ಈಗಾಗ್ಲೇ ತಯಾರಿ ಶುರು ಮಾಡಿಕೊಳ್ಳಲಾಗಿದೆ. ಈ ದಿನಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
Comments