ಮೂವರು ತಂತ್ರಜ್ಞರಿಂದ ಅದ್ದೂರಿಯಾಗಿ ಮೂಡಿಬರ್ತಿದೆ ಕೆಜಿಎಫ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದಲ್ಲಿ ಕ್ಯಾಮಾರಮ್ಯಾನ್ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಅವರುಗಳಿಂದಾಗಿ ಕೆಜಿಎಫ್ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ. ಕೆಜಿಎಫ್ ತಾವು ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ತಯಾರಾಗುತ್ತಿರುವುದಕ್ಕೆ ಈ ಮೂವರೇ ಕಾರಣ ಎಂದು ಪ್ರಶಾಂತ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಮೂವರು ತಂತ್ರಕ್ಷರು ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಿತರಾಗಿಲ್ಲ, ಒಮ್ಮೆ ಟ್ರೇಲರ್ ಹೊರಬಂದ ನಂತರ ಎನೆಲ್ಲಾ ಕ್ರೆಡಿಟ್ ಗಳು ಬಂದರೂ ಅದೆಲ್ಲಾ ಈ ಮೂವರಿಗೆ ಸಲ್ಲಬೇಕು, ಎಲ್ಲಾ ಬೇಸರದ ಶಾಟ್ ಗಲ ನಂತರ ನಾನು ಈ ಕೆಲಸದಲ್ಲಿ ಕೇವಲ ಇರುವೆಯಂತೆ ಮಾತ್ರ, ಉಳಿದ ಎಲ್ಲವನ್ನೂ ಈ ಮೂವರು ಮಾಡುತ್ತಿದ್ದಾರೆ ಎಂದೆನಿಸುತ್ತದೆ ಈ ತಂಡದಿಂದ ನನ್ನ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಿದೆ. ಎಲ್ಲದರ ಕ್ರೆಡಿಟ್ ನನ್ನ ಹೆಸರಿಗೆ ಮಾತ್ರ, ಅವರಿಲ್ಲದೇ ನಾನಿಲ್ಲ ಎಂದು ಹಾಡಿ ಹೊಗಳಿದ್ದಾರೆ. ನಾನು ಬಾಲಿವುಡ್, ತೆಲುಗು, ತಮಿಳು ಸಿನಿಮಾ ನೋಡಿದ್ದೇನೆ. ಆದರೆ ತೆರೆಯ ಮೇಲೆ ಸಿನಿಮಾ ಪ್ರದರ್ಶನ ನಂತರ ಪ್ರೇಕ್ಷಕರು ಪ್ರಪಂಚದಲ್ಲಿಯೇ ಈ ಮೂವರು ಅತ್ಯುತ್ತಮ ತಂತ್ರಜ್ಞರು ಎಂದು ಜನ ಹೊಗಳುತ್ತಾರೆ ಎಂದು ಹೇಳಿದ್ದಾರೆ. ಉಗ್ರಂ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಜೊತೆ ರವಿ ಬಸ್ರೂರ್ ಮತ್ತು ಭುವನ್ ಗೌಡ ಕೆಲಸ ಮಾಡಿದ್ದಾರೆ, ಆದರೆ ಕಲಾ ನಿರ್ದೇಶಕ ಶಿವಕುಮಾರ್ ಜೊತೆ ಇದೆ ಮೊದಲನೇ ಸಿನಿಮಾವಾಗಿದೆ. ತಂಡದ ಜೊತೆಗೂಡಿ ಕೆಲಸ ಮಾಡುವುದರಲ್ಲಿ ಪ್ರಶಾಂತ್ ಗೆ ಹೆಚ್ಚಿನ ನಂಬಿಕೆಯಿದೆಯಂತೆ. ಊ ಸಿನಿಮಾ ತಯಾರಿಕೆ ಬಗ್ಗೆ ಪ್ರೇಕ್ಷಕರು ಮೆಚ್ಚುಗಕೆ ವಕ್ಯ ಪಡಿಸಲಿದ್ದಾರೆ..ಪ್ರಯತ್ನ ಮತ್ತು ಬೆವರು ಲೆಕ್ಕಕ್ಕೆ ಬರುವುದಿಲ್ಲ, ನನ್ನ ಸಿನಿಮಾಗೆ ಎನು ಬೇಕೆಂದು ನನಗೆ ಅನ್ನಿಸಿದೆಯೆ ಅದೆಲ್ಲಾವನ್ನು ಮಾಡಿದ್ದೇನೆ..
Comments