ಲೂಸ್ ಮಾದ ಯೋಗೀಶ್ -ಸಾಹಿತ್ಯ ವಿವಾಹ ಸಂಭ್ರಮಕ್ಕೆ ಕೌಂಟ್ ಡೌನ್ ಶುರು

ನಟ ಲೂಸ್ ಮಾದ ಯೋಗೀಶ್ ತಮ್ಮ ಗೆಳತಿ ಸಾಹಿತ್ಯ ಜೊತೆ ಮದುವೆಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಯೋಗಿ ವಿವಾಹ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ.
ನವೆಂಬರ್ 2ಕ್ಕೆ ಯೋಗಿ ಮತ್ತು ಸಾಹಿತ್ಯ ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಯೋಗಿ ಬಾಳಿಗೆ ಈಗ ಸಾಹಿತ್ಯ ಎಂಟ್ರಿ ಕೊಡಲಿದ್ದಾರೆ. ಜೂನ್ 11ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಮುಂದಿನ ಗುರುವಾರ ಅದ್ದೂರಿಯಾಗಿ ನಡೆಯಲಿದೆ.ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆ ನವೆಂಬರ್ 2ಕ್ಕೆ ನಡೆಯಲಿದ್ದು, ಬೆಂಗಳೂರಿನ ಬನಶಂಕರಿಯ 8ನೇ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಕಾರ್ಯಕ್ರಮ ಜರುಗಲಿದೆ.ಯೋಗೀಶ್ ಮತ್ತು ಸಾಹಿತ್ಯ ವಿವಾಹದ ಲಗ್ನ ಪತ್ರಿಕೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಬೆಳಗ್ಗೆ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Comments