ಚಂದನ್ ರ‍್ಯಾಪ್ ಸಾಂಗ್ ಕೇಳಿ ನಾಚಿ ನೀರಾದ್ರೂ ನಿವೇದಿತಾ..!

ಬಿಗ್‌ಮನೆಯಲ್ಲಿ ಬಾರ್ಬಿ ಡಾಲ್ ಎಂದೇ ಗುರುತಿಸಿಕೊಂಡಿರುವ ನಿವೇದಿತಾಳ ಮೇಲೆ ರ‍್ಯಾಪ್ ಸಾಂಗ್ ಬರೆದ್ರು ಚಂದನ್. 'ನಿನ್ನ ಸ್ಮೈಲೂ ಕ್ಯೂಟಾಗಿದೆ ಓಹೋ ...ನಿನ್ನ ಕಂಗಳು ಬೆಳದಿಂಗಳು' ಎಂದು ಪ್ರಾರಂಭವಾಗುವ ಈ ಗೀತೆ ಸಖತ್ ಆಗಿದೆ. ಈ ಸಾಂಗ್ ಕೇಳುತ್ತಲೇ ನಾಚಿ ನೀರಾದ್ರೂ ನಿವೇದಿತಾ.
ಬಿಗ್ ಮನೆಯಲ್ಲಿರುವ ಸ್ಪರ್ಧಿ ಚಂದನ ಬಗ್ಗೆ ನಿಮಗೆ ಗೊತ್ತಿರಬಹುದು. ರ‍್ಯಾಪ್ ಸಾಂಗ್‌ಗಳ ರಚನೆಯ ಮೂಲಕವೇ ಇವರು ಹೆಸರು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಚಿತ್ರಕ್ಕೂ ಕೂಡ ಇವರು ಸಾಂಗ್ ಬರೆದಿದ್ದಾರೆ. ಬರೆದಿದ್ದು ಕೆಲವೇ ಸಾಂಗ್‌ಗಳಾದ್ರೂ ಕೂಡ ಅವುಗಳು ಚಂದನಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ಟಿವೆ. ಬಿಗ್ ಮನೆಗೆ ಚಂದನ ಎಂಟ್ರಿ ಕೊಟ್ಟಾಗಿನಿಂದ ರ‍್ಯಾಪ್ ಸಾಂಗ್‌ಗಳಿಗೆ ಕೊರತೆಯಿಲ್ಲ. ಸ್ವಲ್ಪ ಸಮಯ ಸಿಕ್ರೆ ಸಾಕು, ಕುಳಿತಲ್ಲಿಯೇ ಸಾಂಗ್ ಹಾಡೋಕೆ ಶುರು ಮಾಡ್ತಾರೆ ಇವರು. ಇವರಿಗೆ ಮನೆಯ ಸದಸ್ಯರು ಕೂಡ ಸಾಥ್ ನೀಡುತ್ತಾರೆ. ನಿನ್ನೆಯೂ ಕೂಡ ಚಂದನ ನ್ಯೂ ಸಾಂಗ್ ಬರೆದ್ರು.
Comments