ಬಿಗ್ ಬಾಸ್ ಕನ್ನಡ ಸೀಸನ್ 5 : ವೀಕ್ಷಕರು ಬಾರಿ ಗರಂ, ಕಾಮೆಂಟ್ ಗಳ ಸುರಿಮಳೆ



'ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಅಪಾರ ಸಾಧನೆ ಮಾಡಿದ್ದೇವೆ. ಹೀಗಾಗಿ ಎಲ್ಲರೂ ನನಗೆ ಮರ್ಯಾದೆ ಕೊಡಲೇಬೇಕು. ನಾನು ಹೇಳಿದ್ದೇ ವೇದ ವಾಕ್ಯ, ನನ್ನ ಅಭಿಮಾನಿಗಳು ನನ್ನನ್ನ ಸಪೋರ್ಟ್ ಮಾಡೇ ಮಾಡ್ತಾರೆ'' ಎಂಬ ಕುರುಡು ನಂಬಿಕೆ ಮೇಲೆ 'ಬಿಗ್ ಬಾಸ್' ಮನೆಯೊಳಗೆ ಹೋಗಿ, ಅಲ್ಲಿ ಬೇಕಾ ಬಿಟ್ಟಿ ನಡೆದುಕೊಂಡ್ರೆ, ವೀಕ್ಷಕರು ಖಂಡಿತವಾಗಿಯೂ ಸಪೋರ್ಟ್ ಮಾಡಲ್ಲ.! 'ಪಬ್ಲಿಕ್ ಮೆಮೊರಿ ಈಸ್ ವೆರಿ ಶಾರ್ಟ್' ಎಂಬ ಮಾತಿನಂತೆ ಜನಸಾಮಾನ್ಯರ ಜ್ಞಾಪಕ ಶಕ್ತಿ ತುಂಬಾ ಕಮ್ಮಿ ಇರಬಹುದು. ಹಾಗಂತ, ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವುದಿಲ್ಲ ಎಂದರ್ಥ ಅಲ್ಲ.!
ಬಿಗ್ ಬಾಸ್' ಮನೆಯಲ್ಲೂ ಅಷ್ಟೇ... ''ಅಡುಗೆ ಮನೆ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವವರು ನಾನು ಹೇಳಿದ ಹಾಗೆ ಕೇಳಬೇಕು'' ಎಂದು ದಯಾಳ್ ಪದ್ಮನಾಭನ್ ಹೇಳಿದ್ದು, ಅಲ್ಲಿಂದ ಜಗಳ ಸಮೀರಾಚಾರ್ಯ, ದಿವಾಕರ್ ಹಾಗೂ ರಿಯಾಝ್ ಸುತ್ತ ಸುತ್ತುಕೊಂಡಿದ್ದು, ಸಿಹಿ ಕಹಿ ಚಂದ್ರು ಗರಂ ಆಗಿ ಮಾತನಾಡಿದ್ದರು. ಈ ಜಗಳ ಆದ ನಂತರ ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್ ಹೇಳಿದ್ದು ಸರಿ ಎಂಬ ಭಾವನೆ ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಮೂಡಿರಬಹುದು. ಆದ್ರೆ, ಅದನ್ನೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ವೀಕ್ಷಕರಿಗೆ ಹಾಗೆನಿಸಿಲ್ಲ.! ಅದಕ್ಕೆ ಈ ಕಾಮೆಂಟ್ ಸಾಕ್ಷಿ.... 'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯ ಸ್ಪರ್ಧಿಗಳು ಮಾಡಿದ್ದೆಲ್ಲವೂ ಸೆಲೆಬ್ರಿಟಿ ಸ್ಪರ್ಧಿಗಳಿಗೆ ತಪ್ಪಾಗಿ ಕಾಣಬಹುದು. ಆದ್ರೆ, ಜನರ ಕಣ್ಣಿಗೆ ಸೆಲೆಬ್ರಿಟಿ ಸ್ಪರ್ಧಿಗಳೇ ವಿಲನ್ ಆಗಿ ಕಾಣುತ್ತಿದ್ದಾರೆ. ಅಷ್ಟು ಸೂಕ್ಷ್ಮವಾಗಿ ಒಬ್ಬೊಬ್ಬರನ್ನೂ ವೀಕ್ಷಕರು ತಾಳೆ ಹಾಕುತ್ತಿದ್ದಾರೆ. 'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!' ಜನಸಾಮಾನ್ಯರನ್ನೇ ಪದೇ ಪದೇ ಸೆಲೆಬ್ರಿಟಿ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿರುವುದನ್ನ ವೀಕ್ಷಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೀಗಾಗಿ, ಕೆಲ ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಮೂಡಿದೆ.
Comments