'ಗೋಲ್ಮಾಲ್ ಎಗೈನ್' ಹವಾ, ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ

ನವದೆಹಲಿ: ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ಮಾಲ್ ಎಗೈನ್ ಹಿಂದಿ ಸಿನಿಮಾ ದಾಖಲೆ ಬರೆದಿದೆ. ಕರಾವಳಿ ಮೂಲದ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಅಜಯ್ ದೇವಗನ್ ,ತಬು, ತುಷಾರ್ ಕಪೂರ್ , ಶ್ರೇಯಾಸ್ ತಾಲ್ಪಡೆ , ಕುನಾಲ್ ಕೆಮ್ಮು , ಅರ್ಷದ್ ವಾರ್ಸಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.
ನವದೆಹಲಿ: ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ಮಾಲ್ ಎಗೈನ್ ಹಿಂದಿ ಸಿನಿಮಾ ದಾಖಲೆ ಬರೆದಿದೆ. ಕರಾವಳಿ ಮೂಲದ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಅಜಯ್ ದೇವಗನ್ ,ತಬು, ತುಷಾರ್ ಕಪೂರ್ , ಶ್ರೇಯಾಸ್ ತಾಲ್ಪಡೆ , ಕುನಾಲ್ ಕೆಮ್ಮು , ಅರ್ಷದ್ ವಾರ್ಸಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ವಿಷಯವನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಮುಖ್ಯ ನಿರ್ವಹಣಾಧಿಕಾರಿ ಶಿಬಾಶಿಶ್ ಸರ್ಕಾರ್ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಗೋಲ್ಮಾಲ್ ಎಗೈನ್ ಚಿತ್ರವು ಫ್ಯ್ರಾಂಚೈಸ್ನೊಂದಿಗೆ ನಾವು ಇನ್ನು ಹೆಚ್ಚಿನ ಮೈಲಿಗಲ್ಲುಗಳನ್ನು ಎದುರು ನೋಡುತ್ತೇವೆ, ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 20ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಈ ನಾಲ್ಕು ದಿನಗಳಲ್ಲಿ 150 ಕೋಟಿ ರೂಪಾಯಿ ಕೋಟಿ ಗಳಿಕೆ ಕಂಡಿದೆ. ರಿಲೀಸ್ ಆದ ಮೊದಲ ನಾಲ್ಕು ದಿನದಲ್ಲಿ ಹಾಸ್ಯ ಭರಿತ ಸಿನಿಮಾ ವಿಶ್ವದ್ಯಂತ ಬಾಕ್ಸ್ ಆಫೀಸ್ ನಲ್ಲಿ 156 ಕೋಟಿ ರೂ ಗಳಿಸಿದೆ.
Comments