ಹಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್

ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಸುದೀಪ್ ಅವರನ್ನು ಹಾಲಿವುಡ್ ಗೆ ಪರಿಚಯಿಸಲು ಆಸ್ಟ್ರೇಲಿಯಾ ಮೂಲದ ನಿರ್ದೇಶಕ ಎಡ್ಡಿ ಆರ್ಯ ಬೆಂಗಳೂರಿಗೆ ಬಂದಿದ್ದಾರೆ. ನಿರ್ದೇಶಕ ಎಡ್ಡಿ ನೇತೃತ್ವದ ತಂಡ ಸುದೀಪ್ ಜೊತೆ ಹಲವು ಸುತ್ತಿನ ಮಾತುಕತೆ ಮುಗಿಸಿ ಫೈನಲ್ ಮಾಡಿದ್ದಾರೆ.
ನಟ ಕಿಚ್ಚ ಸುದೀಪ್, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಕಾಲಿವುಡ್, ಟಾಲಿವುಡ್, ಬಾಲಿವುಡ್ ಗಳಲ್ಲಿ ಮಿಂಚಿದ್ದಾರೆ. ಈಗ ಸುದೀಪ್ ಹಾಲಿವುಡ್ ಗೂ ಹಾರುತ್ತಿದ್ದಾರೆ.ಎಡ್ಡಿ ಆರ್ಯ ತಂಡ ನಿರ್ಮಿಸಿ ನಿರ್ದೇಶಿಸುತ್ತಿರುವ ರೈಸೆನ್ ಸಿನಿಮಾದಲ್ಲಿ ಅಭಿನಯಿಸಲು ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ. ಸುದೀಪ್ ಫೋಟೋಶೂಟ್ ಕೂಡ ಮುಗಿದಿದೆ. ಹಾಲಿವುಡ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎಂಬ ಮಾತು ಎರಡು ಮೂರು ತಿಂಗಳ ಹಿಂದೆಯೇ ಕೇಳಿ ಬಂದಿದ್ದವು, ಸದ್ಯ ಸುದೀಪ್ ವಿಲ್ಲನ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ನಂತರ ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ರೈಸನ್ ಸಿನಿಮಾದಲ್ಲಿ ಸುದೀಪ್ ಪಾತ್ರ ಏನು ಎಂಬುದರ ಬಗ್ಗೆ ಹಾಲಿವುಡ್ ಸಿನಿಮಾ ತಂಡ ಅಧಿಕೃತವಾಗಿ ಘೋಷಿಸಬೇಕಿದೆಯಷ್ಟೇ.
Comments