ಉಪ್ಪಿ ಡಾನ್ ಆಗಲ್ವಂತೆ, ಆಗಾದ್ರೆ ಯಾವ ಸ್ಟಾರ್ ಡಾನ್ ಆಗ್ತಾರೆ?

ರಿಯಲ್ ಸ್ಟಾರ್ ಉಪೇಂದ್ರ ಅವರು 'ಅಂಡರ್ ವರ್ಲ್ಡ್ ಡಾನ್' ಜಯರಾಜ್ ಅವರ ಜೀವನ ಆಧಾರಿತ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಿರಗಿಟ್ಲೆ ಹೊಡೆದಿತ್ತು. ಆದ್ರೆ, 'ಪ್ರಜಾಕೀಯ' ಸ್ಥಾಪನೆ ಮಾಡಿದ ಹಿನ್ನೆಲೆ ಈ ಚಿತ್ರವನ್ನ ಉಪ್ಪಿ ಕೈಬಿಡಲು ನಿರ್ಧರಿಸಿದ್ದಾರಂತೆ.
'ಡಾನ್' ಜಯರಾಜ್ ಪಾತ್ರದಲ್ಲಿ ಕನ್ನಡದ ಯಾವ ನಟ ಸಮರ್ಥವಾಗಿ ಅಭಿನಯಿಸಬಲ್ಲರು ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಉತ್ತರವಾಗಿ 'ಸ್ಯಾಂಡಲ್ ವುಡ್ ಚಕ್ರವರ್ತಿ'ಯ ಕಡೆ ಬೆರಳು ತೋರಿಸಿದೆ ಚಿತ್ರತಂಡ. ಮಾಜಿ ಡಾನ್ ಜಯರಾಜ್ ಅವರ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ.ಉಪೇಂದ್ರ ಮಾಡಲಿದ್ದಾರೆ ಎನ್ನುತ್ತಿದ್ದ ಈ ಚಿತ್ರಕ್ಕೆ ಈಗ ಶಿವರಾಜ್ ಕುಮಾರ್ ಅವರನ್ನ ನಾಯಕನನ್ನಾಗಿಸಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಈ ಕುರಿತು ಶಿವಣ್ಣ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆಯಂತೆ.ಚಿತ್ರದ ಕಥೆ ಕೇಳಿರುವ ಶಿವಣ್ಣ, ಲೋಹಿತ್ ಅವರು ಹೆಣೆದಿರುವ ಕಥೆಯನ್ನ ಮೆಚ್ಚಿಕೊಂಡಿದ್ದಾರಂತೆ. ಆದ್ರೆ, ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
Comments