ಅಪ್ಪ ಮಗಳ ಪಾತ್ರದಲ್ಲಿ ಗಣೇಶ್ ಮತ್ತು ಚಾರಿತ್ರ್ಯಒಟ್ಟಿಗೆ ನಟನೆ
ಅಂದಹಾಗೆ ಗಣೇಶ್ ಹಾಗೂ ಚಾರಿತ್ರ್ಯ ರಿಯಲ್ ಲೈಫ್ ನಲ್ಲಿ ಕೂಡ ಅಪ್ಪ ಮಗಳು! ಈಗ ಚಮಕ್ ಸಿನಿಮಾದಲ್ಲಿ ಕೂಡ ಅಪ್ಪ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಮಾತ್ರ ಚಾರಿತ್ರ್ಯ ಕಾಣಿಸಿಕೊಳ್ಳುತ್ತಿದ್ದು, ಅವಳ ಪಾತ್ರವು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆಯಂತೆ. ಈಗಾಗಲೇ ಈ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಆಗುವ ಲಕ್ಷಣಗಳು ಕಾಣುತ್ತಿವೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ನಟನೆಯ ಹೊಸ ಸಿನಿಮಾವಾದ ಚಮಕ್ ಚಿತ್ರದ ಕುರಿತು ಹೊಸದಾದ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅಪ್ಪ ಮಗಳ ಪಾತ್ರದಲ್ಲಿ ಗಣೇಶ್ ಮತ್ತು ಚಾರಿತ್ರ್ಯ ನಟಿಸುತ್ತಿದ್ದಾರೆ. ಚಮಕ್ ಚಿತ್ರಕ್ಕೆ ಸುನಿ ನಿರ್ದೇಶಕರಾಗಿದ್ದಾರೆ. ಗಣೇಶ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಕಾಮಿಡಿ ನಟ ಸಾಧು ಕೋಕಿಲ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಗಣೇಶ್ ಅವರು ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 29 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಅದೇ ದಿನ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಈಗ ಚಮಕ್ ಸಿನಿಮಾವನ್ನು ಸಹ ಆ ದಿನ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
Comments