ಬಿಗ್ ಬಾಸ್ ನಲ್ಲಿನ ಸಮೀರಾಚಾರ್ಯ ರವರ ಬ್ರಾಹ್ಮಣ್ಯದ ಬಗ್ಗೆ ಬಿಗ್ ಚರ್ಚೆ

ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ಜತೆಗೆ ಜೋರಾಗಿ ಗಾಯತ್ರಿ ಮಂತ್ರವನ್ನು ಹಾಡಿನಂತೆ ಹಾಡಿದ್ದಾರೆ ಸಮೀರಾಚಾರ್ಯ. ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಂಗೀತದಂತೆ ಕೆಲವು ಶಬ್ದಗಳನ್ನು ಕೂಡ ಮಾಡಲಾಗಿದೆ. ಕೊನೆಯಲ್ಲಿ ಯಾ ಇಲಾಹಿ ಇಲ್ಲಲ್ಲಾ ಎಂದು ಮತ್ತೇನೋ ಸೇರಿಸಿಕೊಂಡು ಹಾಡಿದ್ದಾರೆ.
ಸಮೀರಾಚಾರ್ಯರಿಗೆ ತಪ್ಪು-ಸರಿ ಗೊತ್ತಿದೆ. ಗಾಯತ್ರಿ ಮಂತ್ರವನ್ನು ಇಂಥವರು ಹೇಳಬಾರದು ಎಂದು ಇರುವಂತೆಯೇ ಇಂಥವರು ಕೇಳಿಸಿಕೊಳ್ಳಬಾರದು ಅಂತಲೂ ಇದೆ. ಈ ವಿಚಾರದಲ್ಲಿ ಭೇದ- ಭಾವ ಅಂತಿಲ್ಲ. ಇದು ಶಾಸ್ತ್ರ ಸಮ್ಮತವಾದ ವಿಚಾರ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಇರುವ ಸಮೀರಾಚಾರ್ಯ ಅವರಿಗೆ ಈ ಎಲ್ಲ ವಿಚಾರವೂ ಗೊತ್ತು. ಬ್ರಾಹ್ಮಣ ಸಮುದಾಯದ ನಂಬಿಕೆಯೂ ಗೊತ್ತು. ಅಂಥವರು ಹೀಗೆ ಮಾಡಬಾರದಿತ್ತು. ಷೂ ಹಾಕಿಕೊಂಡವರು ಕಾಲಿನಲ್ಲಿ ತಾಳ ಹಾಕುತ್ತಾ ಗಾಯತ್ರಿ ಮಂತ್ರವನ್ನು ಪಾಶ್ಚಾತ್ಯ ಸಂಗೀತದಂತೆ ಹೇಳುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದರು ಭೀಮಸೇನಾಚಾರ್.
ಧರ್ಮಕ್ಕೆ ಚ್ಯುತಿ ಬರದಂತೆ ಎಚ್ಚರ ವಹಿಸಲಿ ಇನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಒಕ್ಕೂಟದ ಪದಾಧಿಕಾರಿಗಳಾದ ಡಾ.ಉಮೇಶ್ ಶರ್ಮ ಗುರೂಜಿ ಮಾತನಾಡಿ, ಪ್ರಾಪಂಚಿಕ ಸಾಧನೆಗಾಗಿ ಸಮೀರಾಚಾರ್ಯರು ಸ್ಪರ್ಧೆಯಲ್ಲಿದ್ದಾರೆ. ಅದು ಅವರ ನಿರ್ಧಾರ. ಆದರೆ ಅವರಿಂದ ಧರ್ಮಕ್ಕೆ ಚ್ಯುತಿ ಬರುವಂಥ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗಬಾರದು. ಈ ರೀತಿ ಗಾಯತ್ರಿ ಮಂತ್ರವನ್ನು ಹಾಡಿನಂತೆ ಹಾಡಿರುವುದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿವಳಿಕೆ ಹೇಳುತ್ತೇವೆ.
Comments