ಮಹಿಳಾ ಕಾಮಿಡಿಯನ್ ಮೇಲೆ ಕಮೆಂಟ್ ಮಾಡಿ ವಿವಾದಕ್ಕೆ ಒಳಗಾದ ನಟ ಅಕ್ಷಯ್ ಕುಮಾರ್

ನವದೆಹಲಿ: ಮಹಿಳಾ ಹಾಸ್ಯಕಲಾವಿದೆಯೊಬ್ಬರ ಮೇಲೆ ಕಮೆಂಟ್ ಮಾಡಿ ಬಾಲಿವುಡ್ ನಟ ಅಕ್ಷಯ್ ಕುಮಾರ ಪೇಚಿಗೆ ಸಿಲುಕಿದ್ದಾರೆ. ಮಹಿಳಾ ಕಾಮಿಡಿಯನ್ ತಂದೆ, ಪತ್ರಕರ್ತ ವಿನೋದ್ ಎಂಬಾತರು ನಟ ಅಕ್ಷಯ್ ಕುಮಾರ ಅವರನ್ನು ಕ್ಷಮೆ ಕೋರುವಂತೆ ಒತ್ತಾಯಿಸಿದ್ದಾರೆ.
ನವದೆಹಲಿ: ಮಹಿಳಾ ಹಾಸ್ಯಕಲಾವಿದೆಯೊಬ್ಬರ ಮೇಲೆ ಕಮೆಂಟ್ ಮಾಡಿ ಬಾಲಿವುಡ್ ನಟ ಅಕ್ಷಯ್ ಕುಮಾರ ಪೇಚಿಗೆ ಸಿಲುಕಿದ್ದಾರೆ. ಮಹಿಳಾ ಕಾಮಿಡಿಯನ್ ತಂದೆ, ಪತ್ರಕರ್ತ ವಿನೋದ್ ಎಂಬಾತರು ನಟ ಅಕ್ಷಯ್ ಕುಮಾರ ಅವರನ್ನು ಕ್ಷಮೆ ಕೋರುವಂತೆ ಒತ್ತಾಯಿಸಿದ್ದಾರೆ.
ಕಾಮಿಡಿಯನ್ ಶೋ ಒಂದರಲ್ಲಿ ನಟ ಅಕ್ಷಯ್ ಕುಮಾರ ಆಗಮಿಸಿದ್ರು. ಈ ವೇಳೆ ಮಹಿಳಾ ಕಾಮಿಡಿಯನ್ ಮಲ್ಲಿಕಾ ದುವಾ ಸಹ ಅಲ್ಲೇ ಇದ್ದರು. ಶೋ ನಡೆಯುತ್ತಿದ್ದ ವೇಳೆಯಲ್ಲಿ ಅಕ್ಷಯ್ ಕುಮಾರ ತನ್ನ ಮಗಳ ಮೇಲೆ ಕೆಟ್ಟ, ಅಸಹ್ಯ, ಅಶ್ಲೀಲ ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಅಕ್ಷಯ ಕುಮಾರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಅಕ್ಷಯ್ ಕುಮಾರ್ ಶ್ರೇಷ್ಠ ವ್ಯಕ್ತಿ. ಅವರ ಹಾಸ್ಯದ ಅರ್ಥವು ತೀರಾ ಕೆಟ್ಟದು, ಅಕ್ಷಯ್ ಕುಮಾರ್ ತನ್ನ ಪುತ್ರಿಯ ಕುರಿತು ಈ ರೀತಿಯಾಗಿ ಮಾತನಾಡಿದ್ದು ತಪ್ಪು, ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
Comments