ಬಿಗ್ ಬಾಸ್ : ಕಾಮನ್ ಮ್ಯಾನ್ ಹಾಗೂ ಸೆಲೆಬ್ರೆಟಿಗಳ ನಡುವೆ ಬಿಗ್ ವಾರ್

ಬಿಗ್‌ಬಾಸ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಬಿಗ್‌ಬಾಸ್ ನೀಡಿದ ಸೂಚನೆಯೇ ಜಗಳಕ್ಕೆ ಕಾರಣವಾಯಿತು. ಸಾಮಾನ್ಯ ಸ್ಪರ್ಧಿ ದಿವಾಕರ್ ಅವರನ್ನು ಟಾರ್ಗೆಟ್ ಮಾಡಿದ ಸಿಹಿಕಹಿ ಚಂದ್ರು, ನೀವು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಾವು ಹೇಳಿದ ಮಾತು ಕೇಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ್ರು.
ಈ ವೇಳೆ ಪ್ರತಿವಾದಕ್ಕೆ ಮುಂದಾದ ದಿವಾಕರ್ ಮೇಲೆ ಸೆಲೆಬ್ರಿಟಿಗಳೆಲ್ಲ ಮುಗಿಬಿದ್ದರು. ಸಿಹಿಕಹಿ ಚಂದ್ರು ಸಪೋರ್ಟ್‌ಗೆ ಬಂದ ದಯಾಳು ಪಧ್ಮನಾಭನ್, ಜಗನ್ ಹಾಗೂ ಜೆಕೆ, ರಿಯಾಜ್ ,ದಿವಾಕರ್ ಮೇಲೆ ಹರಿಹಾಯ್ದರು. ಚಂದ್ರು ಅವರ ಮುಖದಲ್ಲಿ ಕೋಪ ಸ್ಪಲ್ಪ ಜಾಸ್ತಿಯೇ ಇತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಾರ್‌ಗೆ ಬಿಗ್‌ಬಾಸ್ ಮನೆ ಸಾಕ್ಷಿಯಾಯಿತು. 'ಒಂದು ಮೊಟ್ಟೆಯ ಕಥೆ' ಟಾಸ್ಕ್ ವೇಳೆ ನಡೆದ ಸಣ್ಣ ಗೊಂದಲದಲ್ಲಿ ಶ್ರೀನಿವಾಸನ್ ಅವರನ್ನು ಆಶಿತಾ ತರಾಟೆಗೆ ತೆಗೆದುಕೊಂಡ್ರು. ಆಶಿತಾ ಸಹಾಯಕ್ಕೆ ಬಂದ ಅನುಪಮಾ ಕೂಡ ಶ್ರೀನಿವಾಸನ್ ಅವರಿಗೆ ಬಾಯಿಗೆ ಬಂದಂತೆ ಮಾತನಾಡಿದ್ರು. ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪುಗಳಾಗುತ್ತಿವೆ ಎಂಬುದು ಮನೆಯಲ್ಲಿರುವ ಸಾಮಾನ್ಯ ಸ್ಪರ್ಧಿಗಳ ಗಮನಕ್ಕೂ ಬಂದಿದೆ. ಈ ಎಲ್ಲ ಘಟನೆಗಳ ಬಳಿಕ ದಿವಾಕರ್, ಮೇಘಾ ಹಾಗೂ ಇನ್ನಿತರ ಸಾಮಾನ್ಯ ಸ್ಪರ್ಧಿಗಳು ಈ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ರು.
Comments