ಬಿಗ್ ಬಾಸ್' ಮನೆಯಲ್ಲಿ 2 ನೇ ವಾರಕ್ಕೆ ಕಲಹ ಆರಂಭ

ಬಾಲ್ ಬ್ಯಾಲೆನ್ಸ್ ಮಾಡುವಲ್ಲಿ ಶ್ರುತಿ ಪ್ರಕಾಶ್ ಮತ್ತು ಜಯಶ್ರೀನಿವಾಸನ್ ಅವರಲ್ಲಿ ಪೈಪೋಟಿ ನಡೆಯಿತು. ಕೊನೆಯವರೆಗೂ ಉಳಿದ ಶ್ರುತಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮೊದಲ ವಾರ ಅನುಪಮಾ ಕ್ಯಾಪ್ಟನ್ ಆಗಿ ಆಯ್ಕೆಯಾದರೆ, 2 ನೇ ವಾರದಲ್ಲಿ ಶ್ರುತಿ ಕ್ಯಾಪ್ಟನ್ ಆಗಿದ್ದಾರೆ. ಶ್ರುತಿ ಮನೆಯ ಸದಸ್ಯರಿಗೆ ಅಡುಗೆ, ಕ್ಲೀನಿಂಗ್ ಸೇರಿದಂತೆ ವಿವಿಧ ಕೆಲಸ ಹಂಚಿಕೆ ಮಾಡಿದ್ದಾರೆ.
ಮೊದಲ ವಾರ ತಣ್ಣಗಿದ್ದ 'ಬಿಗ್ ಬಾಸ್' ಮನೆಯಲ್ಲಿ 2 ನೇ ವಾರಕ್ಕೆ ಕಲಹ ಆರಂಭವಾಗಿದೆ. ಸದಸ್ಯರ ನಡುವೆ ಒಬ್ಬೊಬ್ಬರ ವರ್ತನೆ, ಮಾತುಗಳ ಕುರಿತಾಗಿ ಅಸಮಾಧಾನ ವ್ಯಕ್ತವಾಗತೊಡಗಿದೆ. ತೇಜಸ್ವಿನಿ ಮತ್ತು ದಯಾನಂದ್ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನು ದಯಾಳ್ ವರ್ತನೆ ಕುರಿತಾಗಿ ರಿಯಾಜ್ ಅಸಮಾಧಾನ ಹೊರಹಾಕಿದ್ದಾರೆ. ಮೇಘಾ ಕುರಿತಾಗಿಯೂ ಅನೇಕ ಸದಸ್ಯರು ಮಾತಾಡಿಕೊಂಡಿದ್ದಾರೆ. ಇನ್ನು ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾದ ಸವಾಲ್ ನಲ್ಲಿ ಸದಸ್ಯರೆಲ್ಲರೂ ಭಾಗವಹಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸದಸ್ಯರ ಆಯ್ಕೆಯಂತೆ ದಯಾನಂದ್ ನಾಮಿನೇಟ್ ಆಗಿದ್ದಾರೆ. ಸುಮಾ ಮನೆಯಿಂದ ಹೊರ ಹೋಗುವ ಮೊದಲು ನೀಡಿದ್ದ ಸೂಪರ್ ಅಧಿಕಾರ ಬಳಸಿಕೊಂಡು ಸಿಹಿಕಹಿ ಚಂದ್ರು 4 ಮತ ಚಲಾಯಿಸಬಹುದಾಗಿತ್ತು. ಅವರು ಮೂವರನ್ನು ನಾಮಿನೇಟ್ ಮಾಡಿದ್ದಾರೆ. ದಯಾನಂದ್ ನಂತರದಲ್ಲಿ ಮೇಘಾ, ಸಮೀರಾಚಾರ್ಯ, ಕೃಷಿ, ಜಗನ್ನಾಥ್, ಆಶಿತಾ, ದಯಾಳ್, ಜೆ.ಕೆ., ರಿಯಾಜ್ ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಶ್ರುತಿ ಅವರು ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಒಬ್ಬರನ್ನು ಉಳಿಸಬಹುದಾಗಿದೆ ಎಂದು 'ಬಿಗ್ ಬಾಸ್' ತಿಳಿಸಿದಾಗ, ಅವರು ಜೆ.ಕೆ. ಅವರನ್ನು ಉಳಿಸಿದ್ದಾರೆ. ತಣ್ಣಗಿದ್ದ ಮನೆಯಲ್ಲಿ 2 ನೇ ವಾರಕ್ಕೆ ಕಾವೇರತೊಡಗಿದೆ.
Comments