'ಬಾಹುಬಲಿ-2' ಮತ್ತೊಂದು ಹೊಸ ದಾಖಲೆ ಮಾಡಿದೆ.!

24 Oct 2017 11:05 AM | Entertainment
386 Report

'ಬಾಹುಬಲಿ : ದಿ ಕನ್ ಕ್ಲೂಶನ್' ಚಿತ್ರ ಅಕ್ಟೋಬರ್ 8ರಂದು ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಲ್ಲೂ ಬಾಹುಬಲಿ ಮತ್ತೊಂದು ದಾಖಲೆ ಮಾಡಿದೆ. BARC ರೇಟಿಂಗ್ಸ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಿಂದಿ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾರ್ಕ್ ಇಂಡಿಯಾ ರಿಲೀಸ್ ಮಾಡಿರೋ ಪಟ್ಟಿಯಲ್ಲಿ 26,054 ಇಂಪ್ರೆಶನ್ ಗಳೊಂದಿಗೆ ಬಾಹುಬಲಿ-2 ಮೊದಲ ಸ್ಥಾನದಲ್ಲಿದೆ. ಟ್ಯೂಬ್ ಲೈಟ್ ಎರಡನೇ ಸ್ಥಾನ ಪಡೆದಿದ್ದು, ಮೆ ಹೂಂ ಸೂರ್ಯ ಸಿಂಗಮ್-2, ಸೂರ್ಯವಶಂ ಹಾಗೂ ಸನ್ ಆಫ್ ಸತ್ಯಮೂರ್ತಿ ನಂತರದ ಸ್ಥಾನದಲ್ಲಿವೆ.

Edited By

Shruthi G

Reported By

Shruthi G

Comments