ಇನ್ನೂ ಮುಗಿದಿಲ್ಲ ವಿಜಯ್ ‘ಮರ್ಸೆಲ್’ ವಿವಾದ

23 Oct 2017 10:17 PM | Entertainment
315 Report

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಬಿಜೆಪಿ ವಾದಕ್ಕೆ ಬಾಲಿವುಡ್ ನಿರ್ದೇಶಕ ಫರ್ಹಾನ್ ಅಖ್ತರ್ ತಿರುಗೇಟು ನೀಡಿದ್ದಾರೆ.

ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ  ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಬಿಜೆಪಿ ವಾದಕ್ಕೆ ಬಾಲಿವುಡ್ ನಿರ್ದೇಶಕ ಫರ್ಹಾನ್ ಅಖ್ತರ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮತ್ತು ಫರ್ಹಾನ್ ಅಖ್ತರ್ ನಡುವೆ ಈ ವಿವಾದದ ಕುರಿತಾಗಿ ಟ್ವಿಟರ್ ನಲ್ಲಿ ಮಾತಿನ ಚಕಮಕಿಯೇ ನಡೆದಿದೆ.

ರಾವ್ ತಮ್ಮ ಟ್ವಿಟರ್ ನಲ್ಲಿ ಸಿನಿಮಾ ತಾರೆಯರಿಗೆ ಕಡಿಮೆ ಜ್ಞಾನ ಮತ್ತು ಬುದ್ಧಿವಂತಿಕೆಯಿದೆ ಎಂದಿದ್ದರು. ಇದು ಅಖ್ತರ್ ರನ್ನು ಕೆರಳಿಸಿದ್ದು, ಹೀಗೆ ಹೇಳಲು ನಿಮಗೆಷ್ಟು ಧೈರ್ಯ? ಎಂದು ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನರಸಿಂಹ ರಾವ್ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಧೈರ್ಯ ಬೇಕಾಗಿಲ್ಲ. ನಟರ ಕೆಲಸವನ್ನು ಗೌರವಿಸುತ್ತೇವೆ. ಟೀಕೆಗಳನ್ನು ಸರಿಯಾದ ರೀತಿಯಲ್ಲೇ ಸ್ವೀಕರಿಸಿ. ಅಸಹಿಷ್ಣುತೆ ಎನ್ನಬೇಡಿ ಎಂದು ತಿರುಗೇಟು ನೀಡಿದ್ದಾರೆ. ಅಂತೂ ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲರೂ ಪ್ರತಿಕ್ರಿಯಿಸುವ ಮಟ್ಟಿಗೆ ಮರ್ಸೆಲ್ ಚಿತ್ರ ಫೇಮಸ್ಸಾಗಿದೆ.

Edited By

venki swamy

Reported By

Sudha Ujja

Comments