ಸಂಯುಕ್ತ ಹೆಗ್ಡೆ ವಿರುದ್ಧ ಕಿಚ್ಚನ ಫ್ಯಾನ್ಸ್ ಗರಂ..!!
ಯಾವಾಗ, ಎಲ್ಲಿ, ಯಾರ ಜೊತೆ, ಯಾರ ಮುಂದೆ, ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ಲದೆ ಹೋದರೆ ಎಡವಟ್ಟು ಆಗೋದು ಗ್ಯಾರೆಂಟಿ. ಸದ್ಯ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ ಇಕ್ಕಟ್ಟಿಗೆ ಸಿಲುಕಿರುವುದು ಇದೇ ಕಾರಣಕ್ಕೆ.
ಡೇಟ್ಸ್ ವಿಚಾರವಾಗಿ ಈ ಹಿಂದೆ ವಿವಾದಕ್ಕೀಡಾಗಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ ಈಗ ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಸುದೀಪ್ ರವರಿಗೆ 'ಗೌರವ ಕೊಟ್ಟಿಲ್ಲ' ಎಂಬ ಕಾರಣದಿಂದ ನಟಿ ಸಂಯುಕ್ತ ಹೆಗ್ಡೆ ಇದೀಗ ವಿವಾದದ ಕೇಂದ್ರ ಬಿಂದು.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ಬದಲು 'ಕಿಚ್ಚನ್ ಟೈಮ್' ಪ್ರಸಾರ ಅಗುತ್ತಿದೆ. 'ಕಿಚ್ಚನ್ ಟೈಮ್' ಸಂಚಿಕೆಯ ಮೊದಲ ಅತಿಥಿಯಾಗಿ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಭಾಗವಹಿಸಿದರು.
'ಕಿಚ್ಚನ್ ಟೈಮ್' ಬಗ್ಗೆ ನಟಿ ಸಂಯುಕ್ತ ಚಿತ್ರೀಕರಿಸಿದ್ದ ಸೆಲ್ಫಿ ವಿಡಿಯೋ ನಿನ್ನೆ 'ಕಲರ್ಸ್ ಸೂಪರ್' ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಆಗಿತ್ತು. ಆ ವಿಡಿಯೋ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳು ಕೋಪಿಸಿಕೊಂಡಿದ್ದಾರೆ.ಸೆಲ್ಫಿ ವಿಡಿಯೋದಲ್ಲಿ ಕಿಚ್ಚ ಸುದೀಪ್ ರವರಿಗೆ ಸಂಯುಕ್ತ 'ಸರ್' ಎಂದು ಕರೆಯಲಿಲ್ಲ. ಹೀಗಾಗಿ ದೊಡ್ಡ ನಟನಿಗೆ ಸಂಯುಕ್ತ ಗೌರವ ನೀಡಲಿಲ್ಲ ಎಂದು ಸುದೀಪ್ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.''ದೊಡ್ಡವರಿಗೆ ಮೊದಲು ಗೌರವ ಕೊಡು, ಆಮೇಲೆ ಅಡುಗೆ ಮಾಡುವಂತೆ'' ಎಂದು ಸುದೀಪ್ ಅಭಿಮಾನಿಗಳು 'ಕಲರ್ಸ್ ಸೂಪರ್' ಫೇಸ್ ಬುಕ್ ಪುಟದಲ್ಲಿಯೇ ಕಾಮೆಂಟ್ ಮಾಡಿದ್ದಾರೆ.
ಸುದೀಪ್ ಗೆ 'ಸರ್' ಅಂತ ಕರೆಯಲಿಲ್ಲ ಎಂಬ ಕಾರಣಕ್ಕೆ ಸುದೀಪ್ ಫ್ಯಾನ್ಸ್ ಎಷ್ಟು ಗರಂ ಆಗಿದ್ದಾರೆ ಎಂಬುದಕ್ಕೆ ಈ ಕಾಮೆಂಟ್ಸ್ ಸಾಕ್ಷಿ.ನಿನ್ನೆ ರಾತ್ರಿ ಪ್ರಸಾರವಾದ ಸಂಚಿಕೆಯಲ್ಲಿ ನಟಿ ಸಂಯುಕ್ತ ಹೆಗ್ಡೆ, ಸುದೀಪ್ ರವರಿಗೆ 'ಸರ್' ಎನ್ನುತ್ತಲೇ ಮಾತನಾಡಿಸಿದ್ದಾರೆ. ಹೀಗಾಗಿ, ಮೊದಲು ಗರಂ ಆಗಿದ್ದ ಸುದೀಪ್ ಫ್ಯಾನ್ಸ್ ನಂತರ ತಣ್ಣಗಾದರು.
Comments