ಚಿರಂಜೀವಿ ಸರ್ಜಾ-ಮೇಘನಾ ರಾಜ್ ರ ಸಿಂಪಲ್ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ನಿಶ್ಚಿತಾರ್ಥ ನೆರವೇರಿದೆ. ಬೆಂಗಳೂರಿನ ಜೆ.ಪಿ.ನಗರದ ಮೇಘನಾ ರಾಜ್ ನಿವಾಸದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.
ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಕುಟುಂಬಸ್ಥರು ಭಾಗಿಯಾಗಿದ್ದರು. ನಟ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಹಾಗೂ ಪುತ್ರಿ ಐಶ್ವರ್ಯ ಅರ್ಜುನ್, ಜೊತೆಗೆ ಚಿರಂಜೀವಿ ಸರ್ಜಾ ಸಹೋದರ ಧ್ರುವ ಸರ್ಜಾ ಹಾಗೂ ಸುಂದರ್ ರಾಜ್ ದಂಪತಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಂಬೂಲ ಬದಲಾವಣೆ, ಸೀರೆ ನೀಡುವ ಶಾಸ್ತ್ರ ನೆರವೇರಿದವು. ಕೆಂಪು ಬಣ್ಣದ ಸೀರೆ ಉಟ್ಟಿದ್ದ ಮೇಘನಾ ಜತೆ ಬಿಳಿ ಬಣ್ಣದ ಅಂಗಿ ತೊಟ್ಟ ಚಿರು ಜೋಡಿ ಅದ್ಭುತವಾಗಿ ಕಾಣುತ್ತಿತ್ತು. ಸಂಜೆ ಏಳಕ್ಕೆ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದ್ದು ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಚಿರಂಜೀವಿ-ಮೇಘನಾ ವಿವಾಹ ಮಹೋತ್ಸವವು ಇದೇ ಡಿ.6 ರಂದು ನಡೆಯಲಿದೆ ಎಂದು ಹೇಳಲಾಗಿದೆ.
Comments