ಬನ್ನಿ ಮೇಡಂ.. ಬನ್ನಿ ಮೇಡಂ, ಹಿರೋಯಿನ್ನು ಆಗ್ರೀ!
ಬೆಂಗಳೂರು: ಒಳ್ಳೇ ಹೀರೋಯಿನ್ ಹುಡುಕ್ತಿದ್ದೀವಿ, ತೆಲುಗು, ತಮಿಳು ಚಿತ್ರರಂಗದಿಂದ ತರೋಣವೇ? ಇತ್ತೀಚೆಗೆ ಕನ್ನಡದ ನಿರ್ದೇಶಕರಿಂದ ಕೇಳಿ ಬರುತ್ತಿರುವ ಮಾತಿದು.
ಬೆಂಗಳೂರು: ಒಳ್ಳೇ ಹೀರೋಯಿನ್ ಹುಡುಕ್ತಿದ್ದೀವಿ, ತೆಲುಗು, ತಮಿಳು ಚಿತ್ರರಂಗದಿಂದ ತರೋಣವೇ? ಇತ್ತೀಚೆಗೆ ಕನ್ನಡದ ನಿರ್ದೇಶಕರಿಂದ ಕೇಳಿ ಬರುತ್ತಿರುವ ಮಾತಿದು. ಹಿಂದಿ ಹೀರೋಯಿನ್ಸ್ ಸಿಗ್ತಾರಾ ನೋಡ್ರಿ, ನಮ್ ಹಿರೋಗಳಿಗೂ ಚಿತ್ರರಂಗದ ಪ್ರತಿಭಾವಂತ ನಟಿಯರನ್ನು ಬಿಟ್ಟು ಇದ್ದಕ್ಕಿದ್ದ ಹಾಗೇ ಪರದೇಶಿ ವ್ಯಾಮೋಹ ಶುರುವಾಗಿ ಬಿಟ್ಟಿದೆ.
ಕನ್ನಡದ ನಾಯಕಿಯರನ್ನು ಹಾಕೋಳ್ಳೋಣ ಅಂದ್ರೆ ಹೆಚ್ಚಿನ ಹೀರೋ ಗಳು ಒಪ್ಪುವುದೇ ಇಲ್ಲ. ಒಂದು ಕಡೆ ಹಿರೋಯಿನ್ ಗಾಂಚಾಲಿ ಮಾಡುತ್ತಾರೆ ಎಂದು ನಿರ್ದೇಶಕರು ದೂರು ಹೇಳುತ್ತಾರೆ. ಹೊರಗಡೆ ಇಂದ ಕರಕ್ಕೊಂಡು ಬಂದ್ರೆ ಪ್ರೋಫೆಷನಲ್ ಆಗಿ ಇರುತ್ತಾರೆ. ಕಿರಿಕ್ ಮಾಡಲ್ಲ ಎಂದು ಮತ್ತೊಬ್ಬರು ಹೇಳುತ್ತಾರೆ. ದುರಂತ ಅಂದ್ರೆ ಕನ್ನಡದ ಹುಡುಗಿಯರಿಗೆ ಇಲ್ಲಿ ಕೆಲಸ ಸೀಗೋದೇ ಇಲ್ಲ. ಒಂದೆರೆಡು ಸಿನಿಮಾ ಮಾಡಿ ಅವರತ್ತ ತಿರುಗಿ ನೋಡದ ಹಿರೋಗಳು ಕೂಡಾ ಇದ್ದಾರೆ. ಇತ್ತೀಚೆಗೆ ಪರಭಾಷಾ ನಟಿಯರನ್ನು ನಿರ್ದೇಶಕರು ಹಾಗೂ ಹಿರೋಗಳು ಅಂತಸ್ತಿನ ಪ್ರಶ್ನೆಗೆ ಹೋಲಿಸುವುದು ಹೆಚ್ಚಾಗುತ್ತಿದೆ. ಬಿಳಿ ಗ್ಲಾಮರ್ ಗೊಂಬೆಗಳ ನಡುವೆ ಕನ್ನಡದ ನಟಿಯರು ಕಂಗಲಾಗುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ.
Comments