ಬಿಗ್ ಬಾಸ್ ನಲ್ಲಿ ಮೂರ್ಖ, ಬಾಲಿಶ ಸ್ಪರ್ಧಿ ಯಾರು ನಿಮಗೆ ಗೊತ್ತಾ ?
ಕಂಗ್ಲಿಷ್ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಗೊಳಗಾಗಿರುವ ಸ್ಪರ್ಧಿ ನಿವೇದಿತಾ, ದೊಡ್ಡಮನೆಯಲ್ಲಿ ಮೂರ್ಖ, ಬಾಲಿಶ ಹಾಗೂ ಸ್ವಾರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.ಸದ್ಯ ಬಿಗ್ ಬಾಸ್ ನಲ್ಲಿ ಸಖತ್ ಸುದ್ದಿ ಮಾಡ್ತಿರೋದು ಕಂಗ್ಲೀಷ್ ಬೆಡಗಿ ನಿವೇದಿತಾ ಗೌಡ.
ಬಿಗ್ಬಾಸ್ ಸೀಸನ್ 5ರ ಎರಡನೇ ದಿನವಾದ ನಿನ್ನೆ ಸ್ಪರ್ಧಿಗಳಲ್ಲಿ ಎರಡು ತಂಡಗಳನ್ನಾಗಿ ಮಾಡಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ವಿವಿಧ ಪದಗಳಿರುವ ಹಾರಗಳನ್ನು ಬಳಸಲಾಯಿತು. ಈ ಪದಗಳು ಎದುರು ತಂಡದಲ್ಲಿರುವ ಸೂಕ್ತ ವ್ಯಕ್ತಿಯ ಕೊರಳಿಗೆ ಹಾಕಬೇಕಿತ್ತು. ಈ ವೇಳೆ ನಿವೇದಿತಾಳ ಎದುರು ತಂಡ ನಿವೇದಿತಾಳಿಗೆ ಮೂರು ಬೋರ್ಡುಗಳನ್ನು ಹಾಕಿದರು. ಅವುಗಳಲ್ಲಿ ಮೊದಲು ಸ್ವಾರ್ಥಿ, ಎರಡನೇಯದು ಮೂರ್ಖ, ಮೂರನೇಯದು ಬಾಲಿಶ ಎಂದಿತ್ತು.
Comments