ವಿಚಿತ್ರ ಷರತ್ತಿನೊಂದಿಗೆ ಪ್ರಿಯಾಂಕಾ ಛೋಪ್ರಾಗೆ ಸಿಗ್ತಿತ್ತು ಕೆಲಸ




ಬಾಲಿವುಡ್ ನಟಿ ಪ್ರಿಯಾಂಕಾ ತನ್ನ ಜೀವನದ ಏರಿಳಿತಗಳ ಬಗ್ಗೆ ಮಾತನಾಡಿದ್ದಾರೆ. ಅಂದು ತಾವು ಕೆಲಸಕ್ಕಾಗಿ ಎದುರಿಸಿದ್ದ ಕಷ್ಟದ ಬಗ್ಗೆ ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಪ್ರಸ್ತುತ ಅಮೆರಿಕನ್ ಟಿವಿ ಸರಣಿ ಕ್ವಾಂಟಿಕೊದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಏರಿಳಿತಗಳು ಬಗ್ಗೆ ಮಾತನಾಡಿದ್ದಾರೆ. ವೆರೈಟಿ ನಿಯತಕಾಲಿಕೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಹೇಳಿದ್ದಾರೆ.
ನನ್ನ 18-19ನೇ ವಯಸ್ಸಿನಲ್ಲಿಯೇ ವೃತ್ತಿ ಶುರು ಮಾಡಿದ್ದೆ, ಆಗ ಹಾಸ್ಯಾಸ್ಪದವಾಗಿ ಷರತ್ತುಗಳನ್ನು ನನ್ನ ಮುಂದೆ ಇಡಲಾಗ್ತಿತ್ತು. ನೀನು ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕು. ಇಲ್ಲವೆಂದ್ರೆ ನಿನ್ನ ಬದಲು ಬೇರೆಯವರನ್ನು ತೆಗೆದುಕೊಳ್ತೇವೆ ಎನ್ನುತ್ತಿದ್ದರು ಎಂದು ಪಿಗ್ಗಿ ಹೇಳಿದ್ದಾರೆ. ವಾಸ್ತವವಾಗಿ ಪಿಗ್ಗಿಗೆ ವೈರೆಟಿ ನಿಯತಕಾಲಿಕೆ ಪವರ್ ಆಫ್ ವುಮೆನ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕಾ ಪ್ರಸ್ತುತ ಅಮೆರಿಕನ್ ಟಿವಿ ಸರಣಿ ಕ್ವಾಂಟಿಕೊದಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಕೆಲವೇ ದಿನಗಳಲ್ಲಿ ಪ್ರಿಯಾಂಕಾ ಟಿವಿ ಶೋ ವೊಂದನ್ನು ನಿರ್ದೇಶಿಸಲಿದ್ದಾರೆ.
Comments