ಸಂಹಾರ ಟ್ರೇಲರ್ ಬಿಡುಗಡೆ, ನಟ ಚಿರಂಜೀವಿ ಸರ್ಜಾ ವಿಭಿನ್ನ ನೋಟ
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಪ್ರೇಮಿ ಆಗಿ ಚಿರು ಇಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಪ್ರೇಮಿ ಆಗಿ ಚಿರು ಇಲ್ಲಿ ಕಾಣಿಸಿಕೊಂಡಿದೆ. ಈ ಚಿತ್ರ ಬಾಲಿವುಡ್ ನ ಹೃತಿಕ್ ರೋಷನ್ ಅಭಿನಯದ ಕಾಬಿಲ್ ಚಿತ್ರವನ್ನು ನೆನಪಿಸುತ್ತೆ ಆದ್ರೂ ಮುಂದಿನ ದೃಶ್ಯಗಳು ಬೇರೆಯದೇ ಕಥೆ ಹೇಳುತ್ತವೆ. ಕಣ್ಣು ಕಾಣದಿದ್ದರೂ ಅಡುಗೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ನಾಯಕ ರೆಸ್ಟೋರೆಂಟ್ ನಡೆಸುತ್ತಿದ್ದಾನೆ. ಪ್ರೀತಿಗಾಗಿ ಎಂಥದ್ದೇ ಅಪಾಯವನ್ನು ಎದುರಿಸಲು ಸಿದ್ಧನಿರುತ್ತಾನೆ.
ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಕಾವ್ಯಾ ಶೆಟ್ಟಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕಣ್ಣ ಪಾತ್ರದ ಬಗೆಗೆ ಕುತೂಹಲ ಮೂಡಿಸುತ್ತದೆ. ಗುರು ದೇಶಪಾಂಡೆ ಸಂಹಾರದ ಜವಾಬ್ದಾರಿ ವಹಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತ ರವಿ ಬಸ್ರೂರು, ಛಾಯಾಗ್ರಹಣ ಜಗದೀಶ್ ವಾಲಿ ಅವರದ್ದಾಗಿದೆ.
Comments