ನಂದಮೂರಿ ಬಾಲಕೃಷ್ಣಗೆ ನೀರ್ ದೋಸೆ ಬೆಡಗಿ ಹರಿಪ್ರಿಯಾ ನಾಯಕಿ..!
ಬೆಂಗಳೂರು: ನೀರ್ ದೋಸೆ ಬೆಡಗಿ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿ ನಟಿಯಾಗಿದ್ದಾರೆ. ಕನಕ, ಕುರುಕ್ಷೇತ್ರ, ದಿನಕರ್ ತೂಗುದೀಪ್ ಅವರ ಲೈಫ್ ಜೊತೆ ಒಂದ್ ಸೆಲ್ಫೀ ಸೇರಿದಂತೆ ಹರಿಪ್ರಿಯಾ ಕೈತುಂಬಾ ಹಲವು ಸಿನಿಮಾಗಳಿಗೆವ, ಇದರ ಜೊತೆಗೆ ತೆಲುಗು ಸಿನಿಮಾದಲ್ಲೂ ಹರಿಪ್ರಿಯಾ ನಟಿಸುತ್ತಿದ್ದಾರೆ.
ತೆಲುಗಿನ ಪಿಲ್ಲಾ ಜಮೀನ್ದಾರ್ ಮತ್ತು ತಕಿತ ತಕಿತ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯವಿದೆ, ನಂದಮೂರಿ ಬಾಲಕೃಷ್ಣ ಅವರ 102 ನೇ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಕೆಎಸ್ ರವಿಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಲೈಫ್ ಜೊತೆ ಒಂದ್ ಸೆಲ್ಫೀ ಶೂಟಿಂಗ್ ನಲ್ಲಿ ನಿರತವಾಗಿರುವ ಹರಿಪ್ರಿಯಾ ಕರ್ಣ ಹೆಸರಿನ ತೆಲುಗು ಸಿನಿಮಾ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಬಾಲಕೃಷ್ಣ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ಪಷ್ಟಪಜಿಸಿರುವ ಹರಿಪ್ರಿಯಾ ಪಾತ್ರದ ಬಗ್ಗೆ ಮಾತ್ರ ಯಾವುದೇ ಮಾಹಿತಿ ನೀಡಿಲ್ಲ, ಮೂಲಗಳ ಪ್ರಕಾರ ಸಿನಿಮಾದಲ್ಲಿ ಹರಿಪ್ರಿಯಾ ಬಾಲಕೃಷ್ಣ ಅವರ ಪತ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Comments