'ಸುರ್ ಸುರ್ ಬತ್ತಿ' ಸಿನಿಮಾ

ಬೆಂಗಳೂರು : ಮುಗಿಲ್ ನಿರ್ದೇಶನದ 'ಸುರ್ ಸುರ್ ಬತ್ತಿ' ಸಿನಿಮಾವೊಂದು ಬರುತ್ತಿದೆ. ಚಿತ್ರದ ಪೋಸ್ಟರ್ ಸಂದರ್ಭದಲ್ಲಿ ಪತ್ರಕರ್ತರನ್ನು ಕರೆದು ತಂಡ ಮಾಹಿತಿ ಹಂಚಿಕೊಂಡಿದೆ. ದೀಪಾವಳಿ ಎಲ್ಲಾ ಮುಗಿದ ಮೇಲೆ ಸುರ್ ಸುರ್ ಬತ್ತಿ ಹೊತ್ತಿಸಲು ಚಿತ್ರತಂಡ ಮುಂದಾಗಿದೆ.

ಇದು ಎರಡು ಅಮಾಯಕ ಬದುಕನ್ನ ಹಳ್ಳಿ ಹಿನ್ನಲೆಲ್ಲಿ ತೋರಿಸುವ ಸಿನಿಮಾವಂತೆ. ಈ ಸಿನಿಮಾದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೊದಲು ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ, ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ವೈಷ್ಣವಿ ಹೇಳಿದರು. ಇನ್ನು ಕಿರುತೆರೆ ಧಾರವಾಹಿ, ರಿಯಾಲಿಟಿ ಷೋ ಗಳ ಮೂಲಕ ಪರಿಚಿತನಾಗಿರುವ ಆರ್ವ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಾಗ ಎಲ್ಲರು ಇವನನ್ನು ಇಟ್ಟುಕೊಂಡು ಹೇಗೆ ಸಿನಿಮಾ ಮಾಡ್ತೀರಾ? ಎಂದು ನಿರ್ದೇಶಕರನ್ನು ಗೇಲಿ ಮಾಡುತ್ತಿದ್ದರು. ಆದ್ರೆ ಈ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅದು ನಮ್ಮೆಲ್ಲರ ಖುಷಿ ಕೊಟ್ಟಿದೆ ಎಂದು ಅವರು ಹೇಳಿದರು.
'ಸುರ್ ಸುರ್ ಬತ್ತಿ' ಸಿನಿಮಾ ಮುಗಿಲ್ ನಿರ್ದೇಶನದ ಐದನೇ ಸಿನಿಮಾ. ಇದು ಬರೀ ಕಾಮಿಡಿ ಸಿನಿಮಾ ಅಲ್ಲ, ತಾಮಿ ಹಾಗೂ ಮಗನ ಸೆಂಟಿಮೆಂಟ್ ಇರುವ ಚಿತ್ರ. ಅವರಿಬ್ಬರ ಮಧ್ಯೆ ಇನ್ನೊಬ್ಬಳು ಹುಡುಗಿ ಬಂದರೆ ಏನೆಲ್ಲಾ ಆಗುತ್ತದೆ ಎನ್ನುವುದು ಕಥಾವಸ್ತು ಎಂದು ಕಥೆಯ ಎಳೆ ಬಿಟ್ಟುಕೊಟ್ಟೆ ಮಾತಿಗಾರಂಭಿಸಿದರು. ಸುರ್ ಸುರ್ ಬತ್ತಿ ನಿರ್ದೇಶಕ ಮುಗಿಲ್ ಎಂ.
Comments