ರಿಲೀಸ್ ಗೆ ರೆಡಿಯಾಗುತ್ತಿದೆ ಸೂರಜ್ ಶೆಟ್ಟಿ ನಿರ್ದೇಶನದ 'ಅಮ್ಮೆರ್ ಪೊಲೀಸಾ' ತುಳು ಚಿತ್ರ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಾದಂತ್ಯ ತುಳುವಿನಲ್ಲಿ ಈಗ ಮತ್ತೊಂದು ಬಾರಿ ಹೊಸತನದ, ವಿಭಿನ್ನ ಸಿನಿಮಾ ಒಂದು ಮೂಡಿ ಬರುತ್ತಲಿದೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ 'ಅಮ್ಮೆರ್ ಪೊಲೀಸಾ' ಎಂಬ ವಿಭಿನ್ನ ಸಿನಿಮಾ ಕರಾವಳಿಯ ಜನರನ್ನು ರಂಜಿಸಲು ರೆಡಿಯಾಗುತ್ತಿದೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಾದಂತ್ಯ ತುಳುವಿನಲ್ಲಿ ಈಗ ಮತ್ತೊಂದು ಬಾರಿ ಹೊಸತನದ, ವಿಭಿನ್ನ ಸಿನಿಮಾ ಒಂದು ಮೂಡಿ ಬರುತ್ತಲಿದೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ 'ಅಮ್ಮೆರ್ ಪೊಲೀಸಾ' ಎಂಬ ವಿಭಿನ್ನ ಸಿನಿಮಾ ಕರಾವಳಿಯ ಜನರನ್ನು ರಂಜಿಸಲು ರೆಡಿಯಾಗುತ್ತಿದೆ. ತುಳು ಖ್ಯಾತ ನಿರ್ದೇಶಕರಾದ ಸೂರಜ್ ಶೆಟ್ಟಿ ಹೊಸತನಕ್ಕೆ ಸದಾ ಎತ್ತಿದ ಕೈ. ಸದ್ಯ ಸೂರಜ್ ಶೆಟ್ಟಿ ತುಳುವಿನಲ್ಲಿ ಮೂಡಿ ಬರುತ್ತಿರುವ 'ಅಮ್ಮೆರ್ ಪೊಲೀಸಾ'ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ.
ಸೂರಜ್ ಶೆಟ್ಟಿ ಅವರ 'ಅಮ್ಮೆರ್ ಪೊಲೀಸಾ' ಇದೊಂದು ಹೊಸ ಬಗೆಯ ಸಿನಿಮಾ ಎನ್ನಲಾಗುತ್ತಿದೆ. ಕಾಮಿಡಿ ಆಧಾರಿತ ಚಿತ್ರ, ಫ್ಯಾಮಿಲಿ ಸಮೇತ ಬಂದು ನೋಡಬಹುದಾದ ಸಿನಿಮಾ ಎಂದು ಹೇಳಬಹುದು.ಪಕ್ಕಾ ಮನೋರಂಜನಾತ್ಮಕ ಸಿನಿಮಾ. ಹೊಸಬರನ್ನು ಹಾಕಿಕೊಂಡು ಮಾಡಿರುವ ಚಿತ್ರವಿದು. ಕರಾವಳಿಯ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಅಂದಹಾಗೆ, ಈ ಸಿನಿಮಾದಲ್ಲಿ ನಟಿ ಪೂಜಾ ಶೆಟ್ಟಿ ನಾಯಕಿ ಪಾತ್ರದಲ್ಲಿ ಮಿಂಚಿದ್ರೆ, ನಾಯಕರಾಗಿ ರೂಪೇಶ್ ಶೆಟ್ಟಿ ಇದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಸಂದೀಪ್ ಬಲ್ಲಾಲ್ ಇತ್ತೀಚಿಗಷ್ಟೇ 'ಐಸ್ ಕ್ರೀಮ್' ಎಂಬ ತುಳು ಚಿತ್ರದಲ್ಲಿ ನಟ ರೂಪೇಶ್ ಶೆಟ್ಟಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದರು. ಕನ್ನಡ ಹಾಗೂ ಕೊಂಕಣಿ ಚಿತ್ರಗಳಲ್ಲಿ ರೂಪೇಶ್ ಅಭಿನಯಿಸಿದ್ದಾರೆ.
ಇನ್ನು ಅಮ್ಮೆರ್ ಪೊಲೀಸ್ ತುಳು ಚಿತ್ರದಲ್ಲಿ ರೂಪೇಶ್ ನಟಿಸಿತ್ತಿದ್ದು, ನಿರ್ದೇಶಕ ಸೂರಜ್ ಶೆಟ್ಟಿ ಅವರು ಮಾಡಿದ್ದ ಆಡಿಶನ್ ನಲ್ಲಿ ರೂಪೇಶ್ ಸೆಲೆಕ್ಟ್ ಆಗಿದ್ದರು. ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಒಟ್ನಲ್ಲಿ ದಕ್ಷಿಣ ಕನ್ನಡದಾಂದತ್ಯ ತುಳು ಚಿತ್ರ ಅಮ್ಮೆರ್ ಪೊಲೀಸಾ ಚಿತ್ರಕ್ಕೆ ತುಳು ಪ್ರೇಕ್ಷಕರಂತು ಫಿಧಾ ಆಗೋದು ಗ್ಯಾರಂಟಿ.
Comments