ಸೀರೆ ಉಟ್ಟ ರೀತಿಗೆ' ಶೇಮ್ ಶೇಮ್' ಎನ್ನಿಸಿಕೊಂಡ ‘ದಂಗಲ್’ ನಟಿ

ಮುಂಬೈ: ದಂಗಲ್ ಸಿನಿಮಾ ಖ್ಯಾತಿಯ ಫಾತಿಮಾ ಸನಾ ಶೇಖ್ ನಿಮಗೆ ಗೊತ್ತಿರಬಹುದು. ಇದೀಗ ಸುದ್ದಿಯಲಿದ್ದಾರೆ. ಈ ಹಿಂದೆ ಬಿಕಿನಿ ತೊಟ್ಟುಕೊಂಡು ಕಡಲತಡಿಯಲ್ಲಿ ಫೋಟೋ ತೆಗೆಸಿಕೊಂಡು ಇನ್ ಸ್ಟಾಗ್ರಾಂನಲ್ಲಿ ಸುದ್ದಿ ಮಾಡಿದ್ದ ಅದೇ ಫಾತೀಮಾ.
ಮುಂಬೈ: ದಂಗಲ್ ಸಿನಿಮಾ ಖ್ಯಾತಿಯ ಫಾತಿಮಾ ಸನಾ ಶೇಖ್ ನಿಮಗೆ ಗೊತ್ತಿರಬಹುದು. ಇದೀಗ ಸುದ್ದಿಯಲಿದ್ದಾರೆ. ಈ ಹಿಂದೆ ಬಿಕಿನಿ ತೊಟ್ಟುಕೊಂಡು ಕಡಲತಡಿಯಲ್ಲಿ ಫೋಟೋ ತೆಗೆಸಿಕೊಂಡು ಇನ್ ಸ್ಟಾಗ್ರಾಂನಲ್ಲಿ ಸುದ್ದಿ ಮಾಡಿದ್ದ ಅದೇ ಫಾತೀಮಾ. ಇದೀಗ ಸೀರೆ ಉಟ್ಟುಕೊಂಡು ಶೇಮ್, ಶೇಮ್ ಎಂದು ಕರೆಸಿಕೊಳ್ಳುವ ಮೂಲಕ ಸುದ್ದಿ ಮಾಡುತ್ತಿದ್ದಾರೆ.
ಬಿಕನಿ ಉಟ್ಟು ಸಂಪ್ರದಾಯ ವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫಾತಿಮಾ ಈಗ ಸೀರೆ ಉಟ್ಟುಕೊಂಡದ್ದಕ್ಕೂ ಉಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಸೀರೆ ಉಟ್ಟರೂ ಅಭಿಮಾನಿಗಳೇಕೆ ಕ್ಯಾತೆ ತೆಗೆದಿದ್ದಾರೆ ಎಂದು ಆಶ್ಚರ್ಯರಾಗಬೇಡಿ. ಅಭಿಮಾನಿಗಳಿಗೆ ಫಾತಿಮಾ ಉಟ್ಟ ಸೀರೆ ರೀತಿ ಸರಿ ಇಲ್ಲ, ಹೊಕ್ಕುಳ ಕಾಣುವ ಹಾಗೆ ಮೈ ಮಾಟವೆಲ್ಲಾ ಪ್ರದರ್ಶಿಸಿ ಸೆಲ್ಫೀ ತೆಗೆದುಕೊಂಡು ಫಾತಿಮಾ ಇನ್ ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ನೀವು ಉಟ್ಟಿರುವ ಸೀರೆ ರೀತಿ ಸರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ಫಾತಿಮಾ ಬೆನ್ನಿಗೆ ನಿಂತು ನಿವೇನು ತಲೆಕೆಡಿಸಿಕೊಳ್ಳಬೇಡಿ ಜನರು ಏನೇ ಮಾಡಿದ್ರು ಮಾತಾಡಿಕೊಳ್ತಾರೆ ಎಂದಿದ್ದಾರಂತೆ.
Comments