ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ನಿರ್ಮಾಪಕ ಮುನಿರತ್ನ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಇತಿಹಾಸ ಸೃಷ್ಟಿಸಲು ಮುಂದಾಗಿದೆ, ಕೇವಲ ಇನ್ನೂ ಅರ್ಧ ಮಾತ್ರ ಶೂಟಿಂಗ್ ಬಾಕಿಯಿದೆ. ಹೀಗಿರುವಾಗಲೇ ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು 9 ಕೋಟಿ ರು.ಗೆ ಮಾರಾಟವಾಗಿದೆ.
ಕುರುಕ್ಷೇತ್ರ ಸಿನಿಮಾ ಹಿಂದಿ ಡಬ್ಬಿಂಗ್ ಹಕ್ಕು ಪಡೆಯಲು ಹಲವರು ಪ್ರಯತ್ನ ಪಟ್ಟರು, ಆದರೆ ಅಂತಿವಮಾಗಿ ಆದಿತ್ಯ ಅವರಿಗೆ ಸಿಕ್ಕಿದೆ. ಜೊತೆಗೆ ಅತ್ಯಧಿಕ ಹಣಕ್ಕೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವಾಗಲೂ ಹೂಡಿಕೆದಾರರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ, ಆರಂಭದಲ್ಲಿ 4 ಕೋಟಿ ರು ಗೆ ಕೋಟ್ ಮಾಡಲಾಗಿತ್ತು. ಅಂತಿಮವಾಗಿ 9 ಕೋಟಿಗೆ ಮಾರಾಟವಾಗಿದೆ.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ.ಈ ಸಿನಿಮಾಗಾಗಿ ಸುಮಾರು 80 ಕೋಟಿ ರು ಬಂಡವಾಳ ಹೂಡಿದ್ದಾರೆ.
ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾ ಶೂಟಿಂಗ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅದರ ಲಾಭದ ಬಗ್ಗೆ ನಿರೀಕ್ಷೆ ಮಾಡಲಾಗಿದೆ ಸ್ಯಾಟಲೈಟ್, ಹಕ್ಕು ಡಬ್ಬಿಂಗ್ ಹಕ್ಕು ಸೇರಿದಂತೆ ಸಿನಿಮಾ 100 ಕೋಟಿ ಲಾಭ ಗಳಿಸಲಿದೆ ಎಂದು ಅಂದಾಜು ಮಾಡಲಾಗಿದೆ.ತಮಿಳು, ತೆಲುಗು, ಮಲಯಾಳಂ ಭಾಷೆಗಳ ಡಬ್ಬಿಂಗ್ ಹಕ್ಕು 20 ಕೋಟಿ ರು ಗೆ ಮಾರಾಟವಾಗಿದೆ, ಇನ್ನೂ ಸಂಗೀತ ಸೇರಿದಂತೆ ಸ್ಯಾಟ್ ಲೈಟ್ ಮಾರಾಟ ಹಕ್ಕುಗಳಿಂದ ಹಾಕಿರುವ ಬಂಡವಾಳ ವಾಪಸ್ ಬರುತ್ತದೆ ಎನ್ನಲಾಗುತ್ತಿದೆ.
ಈ ತ್ರಿಡಿ ಸಿನಿಮಾ ಕರ್ನಾಟಕದ 60 ಥಿಯೇಟರ್ ಗಳಲ್ಲಿ ಮೊದಲ ವಾರದಲ್ಲೇ 15 ರಿಂದ 20 ಕೋಟಿ ರು. ಕಲೆಕ್ಷನ್ ಮಾಡುತ್ತದೆ, ಭಾರತಾದ್ಯಂತ ವಿತರಣಾ ಹಕ್ಕು ಸೇರಿದಂತೆ ಹಲವು ಮೂಲಗಳಿಂದ ಲಾಭ ಪಡೆಯಲಿದೆ ಎನ್ನಲಾಗುತ್ತಿದೆ. 2018ರ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಯಾಗುವ ಸಾಧ್ಯತೆಯಿದೆ.
Comments