ಪ್ರಥಮ್ ನೀವು ಅಂದುಕೊಂಡಷ್ಟು ಒಳ್ಳೆಯವನಲ್ಲ : ಸಹ ನಿರ್ದೇಶಕ ರಾಮಚಂದ್ರ

'MLA' ಚಿತ್ರದ ಚಿತ್ರೀಕರಣದ ವೇಳೆ ನನ್ನನ್ನು ನಿಂದಿಸಿ ಅವಮಾನ ಮಾಡಿದ್ದಲ್ಲದೇ, ನಿರ್ದೇಶಕ ಮತ್ತು ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಫೇಸ್ ಬುಕ್ ಲೈವ್ ನಲ್ಲಿ ಪ್ರಥಮ್ ವಿರುದ್ಧ ಸಹ ನಿರ್ದೇಶಕ ರಾಮಚಂದ್ರ ಆರೋಪಿಸಿದ್ದಾರೆ.
ಬಿಗ್ ಬಾಸ್' ಪ್ರಥಮ್ ಸದ್ಯ, ವಿವಾದಗಳಿಂದ ದೂರವಾಗಿ ಸಿನಿಮಾದಲ್ಲಿ ಬಿಜಿಯಾಗಿದ್ದರು. ಆದ್ರೆ, ಸಿನಿಮಾ ಸೆಟ್ ನಲ್ಲಿ ಈಗ ವಿವಾದ ಮಾಡಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಹೌದು, 'ಒಳ್ಳೆ ಹುಡುಗ' ಎಂದು ಗುರುತಿಸಿಕೊಳ್ಳುತ್ತಿದ್ದ ಪ್ರಥಮ್ ಅವರನ್ನ ''ಗೋಮುಖ ವ್ಯಾಘ್ರ'' ಎಂದು ಸಹ ನಿರ್ದೇಶಕ ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೈಸೂರಿನ ಮಾನಸ ಗಂಗೋತ್ರಿಯಲ್ಲಿ 'MLA' ಚಿತ್ರೀಕರಣ ನಡೆಯುತ್ತಿತ್ತು. ಸುಡು ಬಿಸಿಲಿನಲ್ಲಿ ಯಾವುದೇ ಬ್ರೇಕ್ ಇಲ್ಲದೇ ತಾಂತ್ರಿಕ ತಂಡ, ಜೂನಿಯರ್ ಕಲಾವಿದರು ಶೂಟಿಂಗ್ ಮಾಡುತ್ತಿದ್ದೇವೆ. ಈ ವೇಳೆ ಪ್ರಥಮ್ ಸುಮಾರು 8 ಟೇಕ್ ತೆಗೆದುಕೊಂಡರೂ ಶಾಟ್ ಮುಗಿಸಲಿಲ್ಲ. ಈ ಮಧ್ಯೆ ಅಲ್ಲಿಗೆ ಬಂದಿದ್ದ ಹುಡುಗರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಶೂಟಿಂಗ್ ಸ್ಥಳದಿಂದ ಹೇಳದೆ ಕೇಳದೆ ಹೊರಟು ಹೋದರು. ನಿರ್ದೇಶಕರು ಕರೆಯುತ್ತಿದ್ದರು ಬೆಲೆ ಕೊಡದೆ ಪ್ರಥಮ್ ಹೋದರು. ಸುಮಾರು ಹೊತ್ತು ಕಳೆದರೂ ಪ್ರಥಮ್ ಶೂಟಿಂಗ್ ಸ್ಪಾಟ್ ಗೆ ಬರಲಿಲ್ಲ.
ಈ ವೇಳೆ ನಾನು ಪ್ರಥಮ್ ಇದ್ದಲ್ಲಿಗೆ ಹೋಗಿ, ಅಚಾನಕ್ ಆಗಿ ಕೈ ಹಿಡಿದು ಎಳೆದು ಕರೆತರಲಾಯಿತು. ಆದ್ರೆ, ಯಾವುದೇ ಕಾರಣಕ್ಕೂ ಅವರಿಗೆ ನೋಯಿಸಿಲ್ಲ. ಪ್ರಥಮ್ ಎಳೆದುಕೊಂಡು ಬಂದ ಕಾರಣಕ್ಕೆ ಎಲ್ಲರ ಮುಂದೆ ಕೆಟ್ಟ ಪದಗಳನ್ನ ಉಪಯೋಗಿಸಿ ನಿಂದಿಸಿದ್ದಾರೆ. ಬಾಯಿಂದ ಹೇಳಲಾಗದಂತಹ ಪದಗಳನ್ನ ಬಳಸಿ ಬೈಯ್ದಿದ್ದಾರೆ. ನಟಿ ರೇಖಾ, ಕುರಿ ಪ್ರತಾಪ್ ಅವರಂತಹ ಹಿರಿಯ ಕಲಾವಿದರು ಸ್ಥಳದಲ್ಲಿದ್ದರೂ ಅವರಿಗೂ ಬೆಲೆ ಕೊಡದೆ ನನ್ನನ್ನು ಅವಮಾನಿಸಿದ್ದಾನೆ. ಇಷ್ಟೆಲ್ಲಾ ಆದ್ಮೇಲೆ ಮುಂದಿನ ದಿನ ಚಿತ್ರೀಕರಣ ಬರಲ್ಲವೆಂದು ನಿರ್ಮಾಪಕರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ರಾಮಚಂದ್ರ ಶೂಟಿಂಗ್ ಗೆ ಬಂದ್ರೆ, ನಾನು ಸಿನಿಮಾ ಮಾಡಲ್ಲವೆಂದು ನಿರ್ದೇಶಕರಿಗೆ ಭಯಪಡಿಸಿದ್ದಾನೆ. ಇದನ್ನ ನಿರ್ದೇಶಕರು ನನ್ನ ಗಮನಕ್ಕೆ ತಂದರು. ಒಂದು ಸಿನಿಮಾ ನಿಲ್ಲಬಾರದು ಎಂಬ ಕಾರಣಕ್ಕೆ ನಾನು ಈ ಚಿತ್ರದಿಂದ ಹೊರಬಂದಿದ್ದೇನೆ. ಪ್ರಥಮ್ ನೀವು ಅಂದುಕೊಂಡಷ್ಟು ಒಳ್ಳೆಯವನಲ್ಲ. ಅವನಿಗೆ ಬೇಕಾಗುವಂತಹ ಕಾಸ್ಟ್ಯೂಮ್ಸ್ ತರಬೇಕು, ಅವನು ಕೇಳುವ ಚಪ್ಪಲಿ, ಬಟ್ಟೆ ತರಬೇಕು. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಯೋಚಿಸಿದ್ದರೇ, ಅವರಿಂದ ದೂರವಿರಿ. ಶೂಟಿಂಗ್ ಬರೋದೇ ಲೇಟು. ಬಂದ ಮೇಲೆ ಆ ಡೈಲಾಗ್ ಹೇಳಲ್ಲ, ಈ ಡೈಲಾಗ್ ಹೇಳಲ್ಲ ಅಂತ ರಗಳೆ ಮಾಡ್ತಾರೆ ಎಂದು ನಿರ್ದೇಶಕ ರಾಮಚಂದ್ರ ಆರೋಪಿಸಿದ್ದಾರೆ.
Comments