ಬಿಗ್ ಬಾಸ್ ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್!

ಕನ್ನಡದ ಬಿಗ್ ಬಾಸ್ ಸಖತ್ ಕಾಂಟ್ರವರ್ಸಿ ಕ್ರಿಯೇಟ್ ಮಾಡಿರುವ ಶೋ. ಕಳೆದ ಬಾರಿ ಸೀಜನ್'ನಲ್ಲಿ ಹುಚ್ಚ ವೆಂಕಟ್ ಸ್ಪರ್ಧಿಗಳನ್ನು ಹೊಡೆದೇ ಬಿಟ್ಟಿದ್ದರು. ಮೊದಲು ರವಿ ಮುರೂರು. ತದನಂತರ ಶೋನಲ್ಲಿ ಗೆಸ್ಟ್ ಆಗಿ ಹೋಗಿ ಪ್ರಥಮ್'ಗೂ ಸಖತ್ ಗೂಸಾ ಕೊಟ್ಟಿದ್ದರು ಮಿಸ್ಟರ್ ಹುಚ್ಚಾ ವೆಂಕಟ್.ಅಲ್ಲಿಗೆ ಇಡೀ ಬಿಗ್ ಬಾಸ್ ರೂಪವೇ ಚೇಂಜ್ ಆಗಿತ್ತು.
ಕನ್ನಡದ ಕಾಂಟ್ರವರ್ಸಿ ಷೋ ಬಿಗ್ ಬಾಸ್-ಫೈವ್ ಆರಂಭಕ್ಕೆ ಕೌಂಡೌನ್ ಶುರು ಆಗಿದೆ. ಬಿಗ್ ಬಾಸ್ ಹೋಸ್ಟ್ ಸುದೀಪ್ ಈ ಸಾರಿ ರಫ್ ಅಂಡ್ ಟಫ್ ಕೂಡ ಆಗಿದ್ದಾರೆ. ಮನೆಯೊಳಗೆ ಕಿತ್ತಾಡೋರಿಗೆ ಕಿಚ್ಚ ಈಗಲೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಆದರೆ,ಸುದೀಪ್ ಈ ಸಲ ಇದನ್ನ ಸಹಿಸುತ್ತಿಲ್ಲ. ನಿರೀಕ್ಷೇನೂ ಮಾಡ್ತಿಲ್ಲ. ಶೋ ಶುರು ಆಗೋ ಮೊದಲೇ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮನೆಯೊಳಗೆ ಹೊಡೆದಾಡಿದ್ರೆ ಹುಷಾರ್. ಕೇಸ್ ಬೀಳೋ ಸಾಧ್ಯತೆ ಇದೆ ಅಂತ ಪರೋಕ್ಷವಾಗಿ ವಾರ್ನ್ ಮಾಡಿದ್ದಾರೆ. ಅಲ್ಲಿಗೆ ಸುದೀಪ್ ಈ ಸಲ ಬಿಗ್ ಬಾಸ್ ಮಾತ್ ಅನ್ನೂ ಕೇಳೋ ಹಂಗೆ ಕಾಣ್ತಿಲ್ಲ.
Comments