ಕನ್ನಡದಲ್ಲಿ ಯಾಕೆ ಅವಕಾಶ ಸಿಗಲಿಲ್ಲ ಎಂಬುದಕ್ಕೆ ಉತ್ತರಿಸಿದ ನಟಿ ಶ್ರಿದೇವಿ




ನಟಿ ಶ್ರಿದೇವಿ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿದವರು. ಆದರೆ ನಂತರದ ದಿನಗಳಲ್ಲಿ ಕನ್ನಡದಿಂದ ಹೆಚ್ಚು ಅವಕಾಶಗಳು ಸಿಗಲಿಲ್ಲ. ಅದಕ್ಕೆ ಕಾರಣವನ್ನು ನೀಡಿದ್ದಾರೆ ನಟಿ ಶ್ರಿದೇವಿ .
ಬೆಂಗಳೂರು: ಬಾಲಿವುಡ್ ಖ್ಯಾತ ನಟಿ ಶ್ರಿದೇವಿ ಕನ್ನಡದಲ್ಲಿ ಚಾನ್ಸ್ ಸಿಗದೇ ಇರುವುದರ ಬಗ್ಗೆ ಮಾತನಾಡಿದ್ದಾರೆ. ಫ್ಯಾಶನ್ ವೀಕ್ ನಲ್ಲಿ
-2017ರಲ್ಲಿ ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಬೆಂಗಳೂರು, ಫ್ಯಾಶನ್
ಹಾಗೂ ಮಗಳು ಜಾಹ್ನವಿಯ ಚಿತ್ರರಂಗದ ಎಂಟ್ರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಟಿ ಶ್ರಿದೇವಿ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿದವರು. ಆದರೆ ನಂತರದ ದಿನಗಳಲ್ಲಿ ಕನ್ನಡದಿಂದ ಹೆಚ್ಚು ಅವಕಾಶಗಳು ಸಿಗಲಿಲ್ಲ. ಅದಕ್ಕೆ ಕಾರಣವನ್ನು ನೀಡಿದ್ದಾರೆ ನಟಿ ಶ್ರಿದೇವಿ . ಭಾಷೆ ಚೆನ್ನಾಗಿ ಬರದ ಕಾರಣ ಅಷ್ಟೊಂದು ಅವಕಾಶಗಳು ಇಲ್ಲಿ ಸಿಗಲಿಲ್ಲ ಎಂದುಹೇಳಿಕೊಂಡಿದ್ದಾರೆ.
ಬೆಂಗಳೂರಿನ ಜತೆ ನನಗೆ ತುಂಬಾ ನಂಟಿದ್ದು, ನನ್ನ ಬಹುತೇಕ ಚಿತ್ರಗಳು ಇಲ್ಲಿಯೇ ಶೂಟಿಂಗ್ ಆಗಿವೆ. ಅವುಗಳ ನೆನಪು ಸದಾ ಇರುತ್ತದೆ. ಬಾಲು ಮಹೇಂದರ್ ನಿರ್ದೇಶನದಲ್ಲಿ ಮೂಡಿ ಬಂದ ಸದ್ಮಾ ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ಇದ್ದೆ. ಅದೇ ಚಿತ್ರದಿಂದಾಗಿ ಬೆಂಗಳೂರಿನ ಜತೆ ಒಡನಾಟ ಹೆಚ್ಚಾಗಿದ್ದು, ಈಗಲೂ ಇಲ್ಲಿಯ ಅನೇಕ ಸ್ಥಳಗಳು ನನಗೆ ನೆನಪಿವೆ ಎಂದು ಶ್ರಿದೇವಿ ಹೇಳಿದರು.
ಬೆಂಗಳೂರಿನ ವಾತಾವರಣ ತುಂಬಾ ಚೆನ್ನಾಗಿದೆ. ಇನ್ನು ಮಗಳು ಜಾಹ್ನವಿ ಚಿತ್ರರಂಗದ ಪ್ರವೇಶ ಕುರಿತಾಗಿ ಮಾತನಾಡಿದ ಅವರು, ಅವಳಿನ್ನು ಯಂಗ್ ನಾವಿನ್ನು ಅವಳ ಚಿತ್ರರಂಗದ ಪ್ರವೇಶದ ಬಗ್ಗೆ ಯೋಚಿಸಿಲ್ಲ. ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ. ಮಗಳು ಕುರಿತು ಹಾಗೂ ರೂಮರ್ ಗಳನ್ನು ಕೇಳಿದಾಗ ನಕ್ಕು ಸುಮ್ಮನಾಗುತ್ತೇವೆ ಎಂದರು.
Comments