ಬಿಗ್ ಬಿ ಬರ್ತಡೇ ಗೆ ಶುಭಕೋರಿದ ನಾಗತಿಹಳ್ಳಿ ಚಂದ್ರಶೇಖರ್
ಮುಂಬೈ: ಬಾಲಿವುಡ್ ನ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ 75ನೇ ಹುಟ್ಟುಹಬ್ಬದ ಪ್ರಯುಕ್ತ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಶುಭಕೋರಿದ್ದಾರೆ.
ಮುಂಬೈ: ಬಾಲಿವುಡ್ ನ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ 75ನೇ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ್ದಾರೆ. ದೇಶ ವಿದೇಶಗಳಲ್ಲೂ ಪ್ರಸಿದ್ಧರಾಗಿರುವ ಅವರಿಗೆ ಈಗಾಗಲೇ ಶುಭಾಷಯಗಳು ಹರಿದು ಬರುತ್ತಿವೆ.ಇನ್ನು ಕನ್ನಡ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಶುಭಕೋರಿದ್ದಾರೆ. ಕನ್ನಡದ ಅಬೃತಾಧಾರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್ ಬಚ್ಚನ್, ಕನ್ನಡದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದರು.
ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್, ಅಮಿತಾಬ್ ಎಲ್ಲಾ ನಟರಂತೆಯೇ ಅಲ್ಲ., ನಟರಾಗಲು ಫಿಸಿಕಲ್ ಅಪಿಯರೆನ್ಸ್ ಚೆನ್ನಾಗಿರೋದು ಮುಖ್ಯ ಎಂದು ಭಾವಿಸುವವರು ಬಹಳ ಮಂದಿ ಇದ್ದಾರೆ. ಆದ್ರೆ ಅವರು ಅದಕ್ಕಿಂತಲೂ ಮನಸ್ಥಿತಿ ಮುಖ್ಯ ಎಂದು ಭಾವಿಸಿದರು.
ಹಾಗಾಗಿಯೇ ಈ ವಯಸ್ಸಿನಲ್ಲೂ ಅವರು ಬೇಡಿಕೆಯ ನಟ ಎನ್ನಿಸಿದ್ದಾರೆ. ವಯಸ್ಸಾಗಿದ್ರು ವಯಸ್ಸಾದಂತೆ ಅನ್ನಿಸುವುದಿಲ್ಲ. ದೇಹಕ್ಕೆ ವಯ್ಯಾದಂತೆ ಮನಸ್ಸಿಗೆ ಎಂದು ವಯಸ್ಸಾಗೋಲ್ಲ. ನಿಜವಾದ ಕಲಾವಿದನಿಗೆ ಪಾತ್ರವನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಅಮಿತಾಬ್ ಅದರಲ್ಲಿ ಪರಿಣಿತರು. ಅವರ ತಂದೆ ಕವಿಯಾಗಿದ್ದರು ಎಂದು ತಿಳಿಸಿದರು.
Comments