ಕಿಚ್ಚನ ಕುರಿತು ಅಸೈನಮೆಂಟ್ ಬರೆದ SSLC ವಿದ್ಯಾರ್ಥಿ

ಇದೀಗ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಯೋರ್ವ ಸುದೀಪ್ ಕುರಿತು ಅಸೈನ್ ಮೆಂಟ್ ರೆಡಿ ಮಾಡಿದ್ದಾನೆ. ಸುಮಾರು ನಾಲ್ಕು ಪುಟಗಳಲ್ಲಿ ಸುದೀಪ್ ಅವರ ಜೀವನ ಹಾಗೂ ಚಿತ್ರಗಳ ಕುರಿತು ಉಲ್ಲೇಖಿಸಿದ್ದಾನೆ. ಈ ಅಸೈನ್ ಮೆಂಟ್ ನ್ನು ಶಾಲೆಗೆ ಸಲ್ಲಿಸಿದ್ದಾನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸುದೀಪ್ ಅವರಿಗೆ ಸಲ್ಲಿಸಿದ್ದಾನೆ.
ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಅಭಿಮಾನಿಗಳು ಪ್ರತಿ ದಿನ ತಮ್ಮ ನೆಚ್ಚಿನ ನಟನ ಮೆಚ್ಚಿಸಲು ಏನಾದ್ರೂ ಮಾಡುತ್ತಲೇ ಇರುತ್ತಾರೆ. ಜೊತೆಗೆ ಅದನ್ನ ಕಿಚ್ಚನ ಟ್ವೀಟ್ ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಯೋರ್ವ ಸುದೀಪ್ ಕುರಿತು ಅಸೈನ್ ಮೆಂಟ್ ರೆಡಿ ಮಾಡಿದ್ದಾನೆ. ಸುಮಾರು ನಾಲ್ಕು ಪುಟಗಳಲ್ಲಿ ಸುದೀಪ್ ಅವರ ಜೀವನ ಹಾಗೂ ಚಿತ್ರಗಳ ಕುರಿತು ಉಲ್ಲೇಖಿಸಿದ್ದಾನೆ. ಈ ಅಸೈನ್ ಮೆಂಟ್ ನ್ನು ಶಾಲೆಗೆ ಸಲ್ಲಿಸಿದ್ದಾನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸುದೀಪ್ ಅವರಿಗೆ ಸಲ್ಲಿಸಿದ್ದಾನೆ. ಇದನ್ನು ನೋಡಿದ ಸುದೀಪ್, ಅಸೈನ್ ಮೆಂಟ್ ಗೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತೋಷವಾಗಿದೆ. ಮಚ್ ಲವ್ ಎಂದು ಟ್ವೀಟ್ ಮಾಡಿದ್ದಾರೆ.
Comments