'ರಾಣಾ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ರಾಕಿಂಗ್ ಸ್ಟಾರ್.. !
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ತಮ್ಮ ಮಾಸ್ ಅಪೀಲ್ ಲುಕ್ ತೋರಿಸಲು ಸಿದ್ದರಾಗಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್ ಹರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಇಂಟರೆಸ್ಟಿಂಗ್ ಪಾತ್ರ ನಿರ್ವಹಿಸಲಿದ್ದಾರೆ.
ರಾಣಾ ಸಿನಿಮಾದಲ್ಲಿ ಪ್ರಥಮ ಬಾರಿಗೆ ಯಶ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ.ಕಥೆಯ ಬಗ್ಗೆ ವಿವರಣೆ ಕೇಳದೇ ಯಶ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಯಶ್ ಅವರ ಮತ್ತೊಂದು ಆಸಕ್ತಿದಾಯಕ ಪಾತ್ರ ನೋಡುವ ಅದೃಷ್ಟ ಪ್ರೇಕ್ಷಕರದ್ದು. ಸಿನಿಮಾ ಸೆಟ್ಟೇರಿದ ನಂತರ ಎಲ್ಲಾ ಮಾಹಿತಿಗಳು ಬಹಿರಂಗಗೊಳ್ಳಲಿವೆ.
5 ಭಾಷೆಗಳಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸಿನಿಮಾ ಬಗ್ಗೆ ಯಶ್ ಹೆಚ್ಚಿನ ಗಮನ ಹರಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.ಹೀಗಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ಹಿಡಿಯುತ್ತಿದೆ. ಯಶ್ ಈ ಸಿನಿಮಾಗಾಗಿ ಯಾವುದೇ ಗಡುವು ವಿಧಿಸಿಲ್ಲ. ಕೆಜಿಎಫ್ ನಂತರವಷ್ಟೇ ಹರ್ಷರವರ ರಾಣಾ ಸಿನಿಮಾ ಸೆಟ್ಟೇರಲಿದೆ.
Comments