ಯುಟ್ಯೂಬ್ ನಲ್ಲಿ ಸಾವಿರಾರು ರೂಪಾಯಿ ಗಳಿಸುವುದು ಹೇಗೆ?
ಪದಗಳಿಂದ, ಮಾತಿನಿಂದ ಇಲ್ಲ ಮಿಮಿಕ್ರಿ, ಹಾಡಿನಿಂದ ಜನರನ್ನು ನೀವು ಮನರಂಜನೆ ಮಾಡಬಲ್ಲಿರಾ? ನಿಮಗೆ ಕೆಲ ವಿಷ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದು, ಅದನ್ನು ಸ್ಪಷ್ಟವಾಗಿ ಜನರ ಮುಂದಿಡುವ ಕೌಶಲ್ಯವಿದ್ದರೆ ಮನೆಯಲ್ಲಿಯೇ ಕುಳಿತು ನೀವು ಸಾವಿರಾರು ರೂಪಾಯಿ ಗಳಿಸಬಹುದು. ಯುಟ್ಯೂಬ್ ಚಾನೆಲ್ ನಿಮಗೆ ಈ ಅವಕಾಶ ನೀಡುತ್ತದೆ.
ಯುಟ್ಯೂಬ್ ನಲ್ಲಿ ಪ್ರತಿ ತಿಂಗಳು 50 ಸಾವಿರದಿಂದ ಲಕ್ಷಾಂತರ ರೂಪಾಯಿ ಗಳಿಸುವವರಿದ್ದಾರೆ. ಯುಟ್ಯೂಬ್ ನಲ್ಲಿ ಸಾವಿರಾರು ರೂಪಾಯಿ ಗಳಿಸಲು ನೀವು ಬಯಸಿದ್ದರೆ ಮೊದಲು ಯುಟ್ಯೂಬ್ ಚಾನೆಲ್ ಮತ್ತು AdSense ಅಕೌಂಟ್ ಓಪನ್ ಮಾಡಬೇಕು. ಯುಟ್ಯೂಬ್ ಚಾನೆಲ್ ತೆರೆಯಲು ನೀವು ಮೊದಲು ಜಿಮೇಲ್ ಅಕೌಂಟ್ ಹೊಂದಿರಬೇಕು. ನಂತ್ರ ಬ್ರೌಸರ್ ನಲ್ಲಿ ಯುಟ್ಯೂಬ್ ಡಾಟ್ ಕಾಮ್ ಓಪನ್ ಮಾಡಿ ಅಲ್ಲಿ ನಿಮ್ಮ ಇಮೇಲ್ ಐಡಿ ಹಾಕಿ ಖಾತೆ ಓಪನ್ ಮಾಡಬೇಕು.
ಯುಟ್ಯೂಬ್ ನಲ್ಲಿ ನಿಮ್ಮ ಖಾತೆ ಓಪನ್ ಆದ ನಂತ್ರ ಕ್ರಿಯೇಟಿವ್ ಸ್ಟುಡಿಯೋಕ್ಕೆ ಹೋಗಿ ಅಲ್ಲಿ ಯುಟ್ಯೂಬ್ ಚಾನೆಲ್ ರಚಿಸಬಹುದು. ನಿಮ್ಮ ಯುಟ್ಯೂಬ್ ಚಾನೆಲ್ ಗೆ ಆಕರ್ಷಕ ಹೆಸರಿಡಿ. ಜೊತೆಗೆ ಗುಣಮಟ್ಟದ ವಿಡಿಯೋವನ್ನು ಹಾಕಿ. ಹಾಗೆ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ. ಹಣಗಳಿಕೆಗೆ ನೀವು ಒಪ್ಪಿಗೆ ನೀಡಬೇಕಾಗುತ್ತದೆ. ಅಂದ್ರೆ ನಿಮ್ಮ ವಿಡಿಯೋ ಜೊತೆ ಜಾಹಿರಾತುಗಳು ಸೇರುತ್ತದೆ. 10 ಸಾವಿರಕ್ಕಿಂತ ಹೆಚ್ಚು ಮಂದಿ ಈ ವಿಡಿಯೋ ನೋಡಿದ ನಂತ್ರ ಯುಟ್ಯೂಬ್ ಜಾಹೀರಾತಿಗೆ ಒಪ್ಪಿಗೆ ನೀಡುತ್ತದೆ. ಇದಾದ ನಂತ್ರ ನಿಮ್ಮ ಗಳಿಕೆ ಶುರುವಾಗುತ್ತದೆ.
Comments