ಕೋಟೆಯ ಸೌಂದರ್ಯ ಸಾರುವ 'ಪದ್ಮಾವತಿ' ಚಿತ್ರದ ಟ್ರೇಲರ್ ರಿಲೀಸ್

ನವದೆಹಲಿ: ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಪದ್ಮಾವತಿ' ಚಿತ್ರದ ಟ್ರೇಲರ್ ಯುಟ್ಯೂಬ್ ನಲ್ಲಿ ರಿಲೀಸ್ ಕಂಡಿದೆ.
ನವದೆಹಲಿ: ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಪದ್ಮಾವತಿ' ಚಿತ್ರದ ಟ್ರೇಲರ್ ಯುಟ್ಯೂಬ್ ನಲ್ಲಿ ರಿಲೀಸ್ ಕಂಡಿದೆ. ರಾಣಿ ಪದ್ಮಾವತಿಯ ಸೌಂದರ್ಯ ಹಾಗೂ ದಿಟ್ಟ ತನ ಈ ಸಿನಿಮಾದಲ್ಲಿ ಮೂಡಿ ಬಂದಿದ್ದು, ರಾಣಿ ಪದ್ಮಾವತಿ ಪಾತ್ರದಲ್ಲಿ ದಿಪೀಕಾ ಪಡುಕೋಣೆ ಕಾಣಿಸುತ್ತಿದ್ದಾರೆ. ಸಾಮ್ರಾಜ್ಯದ ಹೊಣೆ ಹೊತ್ತು ಹೋರಾಟಕ್ಕೆ ನಿಂತ ಮಹರವಾಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಪದ್ಮಾವತಿ ಚಿತ್ರದ ಟ್ರೇಲರ್ 3 ನಿಮಿಷ 9 ಸೆಕೆಂಡ್ ಗಳ ಬಿಂಬಿತವಾಗಿದೆ. ಇನ್ನು ಈ ಚಿತ್ರದಲ್ಲಿ ಶಾಹಿದ್ ಕಪೂರ್ ಭಿನ್ನವಾಗಿ ಕಾಣುತ್ತಾರೆ.
ಚಿತ್ರದ ವಿಶೇಷ ಅಂದ್ರೆ ಯುದ್ಧ ಭೂಮಿ, ಕೋಟೆ, ಸೇನೆ ಮತ್ತು ಅರಮನೆ ಸೌಂದರ್ಯ ಎಲ್ಲರನ್ನು ಟ್ರೇಲರ್ ಒಳಗೊಂಡಿದೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಒರಟು ತನ ಇಲ್ಲಿ ಎದ್ದು ಕಾಣುತ್ತದೆ. ಉಳಿದಂತೆ ಮಧ್ಯಾಹ್ನ 13.03ಕ್ಕೆ ಸರಿಯಾಗಿ ಟ್ರೇಲರ್ ರಿಲೀಸ್ ಆಗಿದೆ. ಚಿತ್ತೋರ್ ಕೋಟೆ ಮೇಲೆ ಆಕ್ರಮಣ ಮಾಡುವ ಅಲ್ಲಾವುದ್ದೀನ್ ಖಿಲ್ಜಿ ವಿರುದ್ಧ ರತನ್ ಸಿಂಗ್ 1303ರಲ್ಲಿ ಮೊದಲ ಬಾರಿ ಹೋರಾಟ ನಡೆಸಿದ ಪ್ರತೀಕವಾಗಿ ಟ್ರೇಲರ್ ಬಿಡುಗಡೆಗೆ 13.03 ಸಮಯ ನಿಗದಿ ಮಾಡಲಾಗಿತ್ತು ಎನ್ನಲಾಗಿದೆ.
Comments