ನಟಿ ಮೇಘನಾ ರಾಜ್, ಚಿರಂಜೀವಿ ಸರ್ಜಾ ಮದುವೆ



ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೆರೆಡು ಜೋಡಿಗಳು ಹಸೆಮಣೆ ಏರಲಿವೆ. ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರನ್ನು ವರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೆರೆಡು ಜೋಡಿಗಳು ಹಸೆಮಣೆ ಏರಲಿವೆ. ನಟ ಚಿರಂಜೀವಿ ಸರ್ಜಾ ಅವರು ನಟಿ ಮೇಘನಾ ರಾಜ್ ಅವರನ್ನು ವರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅ.22ರಂದು ಚಿರು ಹಾಗೂ ಮೇಘನಾ ರಾಜ್ ಜೋಡಿಯ ನಿಶ್ಚಿತಾರ್ಥ ನಡೆಯಲಿದೆ. ಡಿ. 6ಕ್ಕೆ ಮದುವೆ ದಿನಾಂಕ ನಿಗದಿಯಾಗಲಿದೆಯಂತೆ.
ಹಿರಿಯ ನಿರ್ಮಾುಕ ದ್ವಾರಕೀಶ್ ನಿರ್ಮಾಣದ ಆಟಗಾರ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ಇವರಿಬ್ಬರು, ಬಹು ದಿನಗಳ ವರೆಗೆ ಸ್ನೇಹಿತರಾಗಿದ್ದರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಿರಿಯ ನಟ ಸುಂದರ್ ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ದಂಪತಿಯ ಏಕೈಕ ಪುತ್ರಿಯಾಗಿರುಲ ಮೇಘನಾ ರಾಜ್, ಚಿರಂಜೀವಿ ಸರ್ಜಾ ಹಿರಿಯ ನಟ ಅರ್ಜುನ ಸರ್ಜಾ ಅವರ ಅಕ್ಕನ ಮಗ.
Comments