100 ಕೋಟಿ ದಾಟಿದ ಜುಡ್ವಾ-2 ಚಿತ್ರ
ಬಾಲಿವುಡ್ ನಟ ವರುಣ್ ಧವನ್ ಅಭಿನಯದ ಜುಡ್ವಾ-2 ಚಿತ್ರ 100 ಕೋಟಿ ಗಳಿಕೆ ಕಾಣುವುದರ ಮೂಲಕ ಗಡಿ ದಾಟಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ 'ಜುಡ್ವಾ-2' ಚಿತ್ರವು 100 ಕೋಟಿ ಕ್ಲಬ್ ಸೇರಿರುವುದು ಸಿನಿಮಾ ತಂಡದವರಿಗೆ ಖುಷಿಯನ್ನುಂಟು ಮಾಡಿದೆ.

ಡೇವಿಡ್ ಧವನ್ ನಿರ್ದೇಶನದ ಚಿತ್ರ ಶುಕ್ರವಾರ ದಂದು 2 ಕೋಟಿ 25 ಲಕ್ಷ ಕಲೆಕ್ಷನ್ ಕಂಡಿತ್ತು. ಇಂದು ಬಾಕ್ಸ್ ಆಫೀಸ್ ನಲ್ಲಿ 102 ಕೋಟಿ 33 ಲಕ್ಷ ಗಳಿಕೆ ಕಂಡಿದೆ. ಶುಕ್ರವಾರದಂದು ಶಾರೂಖ್ ಖಾನ್ ಜತೆಗೆ ಸಿನಿಮಾ ವೀಕ್ಷಿಸಲು ಬಂದಿದ್ದ ವರುಣ್ ಅವರ ಮೂರನೇ ಚಿತ್ರ 100 ಕೋಟಿ ಕ್ಲಬ್ ಗೆ ತಲುಪಿದೆ. ಈ ವರ್ಷವೇ ತೆರೆಕಂಡ ಮತ್ತೊಂದು ಚಿತ್ರ 'ಬದ್ರಿನಾಥ್ ಕೀ ದುಲ್ಹನೀಯಾ' ಸಿನಿಮಾ 116 ಕೋಟಿ 68 ಲಕ್ಷ ರೂಪಾಯಿ ಗಳಿಕೆ ಕಂಡಿತ್ತು. ಅಲ್ಲದೇ 'ಎಬಿಸಿಡಿ-2' 105 ಕೋಟಿ 75 ಲಕ್ಷ ಗಳಿಕೆ ಕಂಡಿತ್ತು.
Comments