ನಟಿ ಐಶ್ವರ್ಯಾ ರೈ ಇದ್ದಕ್ಕಿದ್ದಂತೆ ಶೂಟಿಂಗ್ ರದ್ದುಗೊಳಿಸಿದ್ದೇಕೆ?

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅನಿಲ್ ಕಪೂರ್ ಜತೆಗೆ ‘ಫನ್ನೆ ಖಾನ್’ ಎಂಬ ಸಿನಿಮಾದಲ್ಲಿ ನಟಿಸುತ್ತಾರೆಂದು ಎಲ್ಲರಿಗೂ ಗೊತ್ತು. ಆದರೆ ಇದೀಗ ಶೂಟಿಂಗ್ ಕ್ಯಾನ್ಸಲ್ ಮಾಡಿ ಐಶ್ವರ್ಯಾ ವಿದೇಶಕ್ಕೆ ಹಾರಿದ್ದಾರೆ!
ಅದಕ್ಕೆ ಕಾರಣ ಕಾಸ್ಟ್ಯೂಮ್. ಫನ್ನೆ ಖಾನ್ ಚಿತ್ರದಲ್ಲಿ ಐಶ್ವರ್ಯಾ ಪಾಪ್ ಸ್ಟಾರ್ ಪಾತ್ರ ಮಾಡುತ್ತಿದ್ದಾರಂತೆ. ಆದರೆ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪು ಭಾರತೀಯ ಉಡುಪಿನಂತೆ ಇದೆ ಎನ್ನುವ ಕಾರಣಕ್ಕೆ ಐಶ್ ಗೆ ಇದು ಇಷ್ಟವಾಗಲಿಲ್ಲವಂತೆ.
ಅದಕ್ಕೇ ಐಶ್ ಶೂಟಿಂಗ್ ರದ್ದುಗೊಳಿಸಿದ್ದಾರೆ. ಐಶ್ ಬೇಸರಗೊಂಡಿರುವ ಕಾರಣಕ್ಕೆ ಚಿತ್ರತಂಡ ಎರಡು ದಿನ ಶೂಟಿಂಗ್ ಗೆ ರಜೆ ಘೋಷಿಸಿದೆಯಂತೆ. ಇದೀಗ ಮಾವ ಅಮಿತಾಭ್ ಬಚ್ಚನ್ ಬರ್ತ್ ಡೇ ಸೆಲೆಬ್ರೇಷನ್ ಗಾಗಿ ಐಶ್ ವಿದೇಶಕ್ಕೆ ಹಾರಿಯಾಗಿದೆ. ಮುಂದಿನ ಮಾತೇನಿದ್ದರೂ ವಿದೇಶದಿಂದ ಬಂದ ಮೇಲೆಯೇ.
Comments