ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ

07 Oct 2017 12:28 PM | Entertainment
362 Report

ಇಂದು ಸಂಜೆ ಗೋವಾದಲ್ಲಿ ಅದ್ಧೂರಿಯಾಗಿ ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆ ನಡೆಯಲಿದೆ. ಹಿಂದೂ ಪದ್ಧತಿಯಂತೆ ನಡೆದ ಮದುವೆಯಲ್ಲಿ ನಾಗ ಚೈತನ್ಯ ಕುರ್ತಾ ಧರಿಸಿದ್ದರು. ಸಮಂತಾ ಬಂಗಾರ ಬಣ್ಣದ ಸೀರೆಯುಟ್ಟಿದ್ದರು. ವಧುವಿನ ಡ್ರೆಸ್ ನಲ್ಲಿ ಸಮಂತಾ ಸುಂದರವಾಗಿ ಕಾಣಿಸುತ್ತಿದ್ದರು.

ಟಾಲಿವುಡ್ ನ ಅಚ್ಚು ಮೆಚ್ಚಿನ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಜೋಡಿ ಈಗ ದಂಪತಿಯಾಗಿ ಹೊಸ ಜೀವನ ಶುರುಮಾಡಿದ್ದಾರೆ. ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿದೆ. ಕ್ಯಾಥೋಲಿಕ್ ಪದ್ಧತಿಯಂತೆ ಮದುವೆ ನಡೆದ ನಂತ್ರ ಅಕ್ಟೋಬರ್ 9ರಂದು ಹೈದ್ರಾಬಾದ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಟಾಲಿವುಡ್ ನ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ವಧು-ವರರನ್ನು ಆಶೀರ್ವದಿಸಲಿದ್ದಾರೆ. ಸುಮಾರು 150 ಮಂದಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದಕ್ಕಾಗಿ 10 ಕೋಟಿ ಖರ್ಚು ಮಾಡಲಿದೆ ಎಂದು ಮೂಲಗಳು ಹೇಳಿವೆ.  ನಂತ್ರ ಇಬ್ಬರೂ ಅಮೆರಿಕಾಕ್ಕೆ ಹನಿಮೂನ್ ಗೆ ಹೋಗಲಿದ್ದಾರೆ ಎನ್ನಲಾಗ್ತಿದೆ.

Edited By

Suresh M

Reported By

Madhu shree

Comments