ಜುಡ್ವಾ-2 ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ರೆಸ್ಪಾನ್ಸ್

ಮುಂಬೈ: ಬಾಲಿವುಡ್ ನಲ್ಲಿ ಜುಡ್ವಾ-೨ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಯುವ ನಟ ವರುಣ್ ಧವನ್ ಅಭಿನಯಕ್ಕೆ ಚಿತ್ರರಸಿಕರು ಫುಲ್ ಫಿದಾ ಆಗಿದ್ದು, ಇದೀಗ ಚಿತ್ರ 100 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಅಧಿಕ ಗಳಿಕೆ ಕಾಣುತ್ತಿದೆ.

1997ರಲ್ಲಿ ಸಲ್ಮಾನ್ ದ್ವಿಪಾತ್ರದಲ್ಲಿ ನಟಿಸಿದ ಜುಡ್ವಾ ಚಿತ್ರದ ಎರಡನೇ ಭಾಗದಲ್ಲಿ ವರುಣ್ ಹಾಗೂ ರಾಜಾ ಪಾತ್ರದಲ್ಲಿ ನಟಿಸಿದ್ದಾರೆ. ವರುಣ್ ಧವನ್ , ಜ್ಯಾಕಲಿನ್ ಫರ್ನಾಂಡಿಸ್ ಹಾಗೂ ತಾಪ್ಸಿ ಪನ್ನು ಜತೆಯಾಗಿ ಕಾಣಿಸಿಕೊಂಡಿದ್ದು, ಚಿತ್ರ ನಾಗಾಲೋಟದಲ್ಲಿ ಓಡುತ್ತಿದೆ. ಈ ಬಗ್ಗೆ ಚಿತ್ರ ವಿಶ್ಲೇಷಕ ತರುಣ್ ಆದರ್ಶ ಅವರು ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಶುಕ್ರವಾರ 16.10 ಕೋಟಿ, ಶನಿವಾರ 20.55 ಕೋಟಿ ಹಾಗೂ ಭಾನುವಾರ 22.60 ಕೋಟಿ, ಸೋಮವಾರ 18 ಕೋಟಿ, ಮಂಗಳವಾರ 8.05ಕೋಟಿ, ಬುಧುವಾರ 6.72ಕೋಟಿ, ಗುರುವಾರ 6.6ಕೋಟಿ. ಅದರಂತೆ ಈ ಇಂದು ಈ ಮೊತ್ತ ಪ್ರಸಕ್ತ ವರ್ಷದ ಅತಿ ಹೆಚ್ಚು ಗಳಿಕೆ ಕಾಣುವುದೇ ಕಾದು ನೋಡ್ಬೇಕು.
Comments