ಶಾಹಿದ್-ಕತ್ರೀನಾ ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ!

06 Oct 2017 12:38 PM | Entertainment
413 Report

ಮುಂಬೈ: ಶಾಹಿದ್ ಕಪೂರ್ ಹಾಗೂ ಕತ್ರೀನಾ ಕೈಫ್ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸುತ್ತಿರುವ ಮುಂದಿನ ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವರದಿಯೊಂದರ ಪ್ರಕಾರ ಶಾಹಿದ್ ಹಾಗೂ ಕತ್ರಿನಾ ‘ಅಂಕೇನ್’ ಚಿತ್ರದ ಸಿಕ್ವೇಲ್ ನಲ್ಲಿ ನಟಿಸುತ್ತಿದ್ದಾರೆ. ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಚಿತ್ರದ ನಿರ್ದೇಶಕ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾನ್ಯ ಜನರು ವಿದ್ಯುತ್ ಗಾಗಿ ಭಾರೀ ಬಿಲ್ ಕಟ್ಟುವುದ್ದಕ್ಕೆ ದೇಶದ ವಿದ್ಯುತ್ ವಿತರಣಾ ಕಂಪೆನಿಗಳ ಜೊತೆ ಜಗಳವಾಡುವ ಕಥೆಯನ್ನು ಸಿನಿಮಾ ಹೊಂದಿದೆ.

ವಿಪುಲ್ ಕೆ. ರಾವಲ್ ಚಿತ್ರದ ಕಥೆ ಬರೆಯುತ್ತಿದ್ದಾರೆ. ಕತ್ರಿನಾ ಲಾಸ್ ಎಂಜಲೀಸ್ ಗೆ ಹೋಗುವ ಮೊದಲು ನಿರ್ದೇಶಕ ಚಿತ್ರದ ಕಥೆಯನ್ನು ಕತ್ರಿನಾಗೆ ಹೇಳಿದ್ದರು. ಕತ್ರಿನಾಗೆ ಚಿತ್ರದ ಕಥೆ ಇಷ್ಟ ಆಗಿದ್ದು, ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಹಾಗೂ ಈ ಚಿತ್ರದ ಕಥೆ ಇನ್ನಷ್ಟು ಅದ್ಭುತವಾಗಿ ಮಾಡಲು ಹೇಳಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಸದ್ಯ ಕತ್ರಿನಾ ಈಗ ಟೈಗರ್ ಜಿಂದಾ ಹೈ, ಥಗ್ಸ್ ಆಫ್ ಹಿಂದೋಸ್ತಾನ್, ಶಾರೂಖ್ ಜೊತೆ ನಟಿಸುತ್ತಿರುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹಾಲಿವುಡ್ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ. ಅವರ ಡೇಟ್ಸ್ ಗಳು ಬಿಡುವಾದಾಗ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

Edited By

Shruthi G

Reported By

Shruthi G

Comments