ಟಗರು ಚಿತ್ರದ ಹಾಡುಗಳು ನವೆಂಬರ್ ನಲ್ಲಿ ರಿಲೀಸ್...
ಕೆ.ಪಿ. ಶ್ರೀಕಾಂತ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದ್ದು, ಕಳೆದ ಕೆಲ ತಿಂಗಳನಿಂದ ಟಗರು ಚಿತ್ರೀಕರಣ ಭರದಿಂದ ಸಾಗಿದೆ. ಪ್ರತಿಯೊಂದು ಶಾಟ್ ವಿಭಿನ್ನವಾಗಿ ಮೂಡಿಬರಬೇಕೆಂದು ಸೂರಿ ನಿರ್ಧರಿಸಿದ್ದು, ಅದರಂತೆಯೇ ಚಿತ್ರ ಮೂಡಿ ಬಂದಿದೆ ಎನ್ನಲಾಗಿದೆ.
ದುನಿಯಾ ಸೂರಿ ನಿರ್ದೇಶನ ಮತ್ತು ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರದ ಹಾಡುಗಳು ನವೆಂಬರ್ ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಹೊಸಪೇಟೆಯಲ್ಲಿ ಇನ್ನೊಂದು ಹಾಡಿನ ಚಿತ್ರೀಕರಣ ಮಾಡಲು ಸಿದ್ಧತೆ ನಡೆದಿದೆ. ಈ ಹಾಡಿನಲ್ಲಿ ಮಾನ್ವಿತಾ ಹರೀಶ್, ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾ ಗ್ರಹಣ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಡಿಫೆಂಟ್ ಶೇಡ್ ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಾನ್ವಿತಾ ಹುಡುಗಾಟದ ಹುಡುಗಿಯಾಗಿ ನಟಿಸಿದ್ದಾರೆ.
Comments