ಪುಟ್ಟ ಪಾತ್ರದಿಂದ ಎಂಟ್ರಿ ಕೊಟ್ಟ ಮಮತಾ ರಾಹುತ್ ಗೆ ಇಂಡಿಯನ್ ಐಕಾನ್ ಪ್ರಶಸ್ತಿ

ಚಿತ್ರರಂಗಕ್ಕೆ ಬರುತ್ತಲೇ ನಾಯಕಿ ಪಾತ್ರವೇ ಬೇಕು ಅಂತ ಹೇಳುವ ನಟಿಯರಿಗಿಂತ ಈಕೆ ಭಿನ್ನಎಂದೇ ಹೇಳಬಹುದು . ಹಾಸ್ಯ ಪಾತ್ರದಿಂದ ಹಿಡಿದು ಎಲ್ಲಾ ರೀತಿಯ ಪಾತ್ರವನ್ನ ನಿಭಾಯಿಸಬಲ್ಲ ನಟಿ.
ಕನ್ನಡದ ನಟಿಯರಲ್ಲಿ ಮೊಟ್ಟ ಮೊದಲ ಸಿಕ್ಸ್ ಪ್ಯಾಕ್ ಹೊಂದಿರುವ ನಟಿ ಈಕೆ. ಕನ್ನಡದ ನಟಿ ಮಮತಾ ರಾಹುತ್ ದಕ್ಷಿಣದ ಎಲ್ಲ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು,ಒಂದು ಪುಟ್ಟ ಪಾತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಮತಾ ಈಗ ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿರುವಾಕೆ. ತನ್ನ ಪಾತ್ರಕ್ಕಾಗಿ ವರ್ಕ್ ಔಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡ ಮೊದಲ ನಟಿ. ಇವರ ಸಾಧನೆ ಗುರುತಿಸಿ ದೆಹಲಿಯ ರಾಷ್ಟ್ರ ಮಟ್ಟದ ಸಂಸ್ಥೆ ಆಲ್ ಇಂಡಿಯಾ ಅಚಿವರ್ಸ್ ಕಾನ್ಫರೆನ್ಸ್ಇಂಡಿಯನ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಿದೆ.
Comments