ನಟಿ ಸಮಂತಾ ಹಾಗೂ ನಾಗಚೈತನ್ಯ ಮದುವೆಗೆ ಕ್ಷಣಗಣನೆ ಆರಂಭ

ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಸಿಂಪಲ್ ಆಗಿ ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ಟಾಲಿವುಡ್ ಅಂಗಳದಲ್ಲಾಗ್ತಿದೆ.ಅಕ್ಟೋಬರ್ 7ರಂದು ಗೋವಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮತ್ತೆ ಮದುವೆಯಾಗಲಿದ್ದಾರೆ.
ಅಕ್ಟೋಬರ್ 9ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆಗೆ ಆಗಮಿಸುವ ಸಂಬಂಧಿಕರ ಪಟ್ಟಿಯಲ್ಲಿ ಕೇವಲ 100 ಜನರ ಹೆಸರು ಮಾತ್ರವಿದೆ. ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಹಾಗೂ ಕೆಲವೇ ಕೆಲವು ಸ್ನೇಹಿತರು ಮದುವೆಗೆ ಬರಲಿದ್ದಾರೆ. ಹಿಂದೂ ಪದ್ಧತಿಯಂತೆ ನಡೆಯುವ ಮದುವೆಯಲ್ಲಿ ಸಮಂತಾ, ನಾಗ ಚೈತನ್ಯ ಸಾಂಪ್ರದಾಯಿಕ ಉಡುಗೆ ತೊಡಲಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದ ಮದುವೆಗಾಗಿ ವಿಶೇಷ ಡಿಸೈನ್ ಡ್ರೆಸ್ ಸಿದ್ಧಪಡಿಸಲಾಗಿದೆ. ಮದುವೆ, ರಿಸೆಪ್ಷನ್ ನಂತ್ರ ಜೋಡಿ ನ್ಯೂಯಾರ್ಕ್ ಗೆ ಹನಿಮೂನ್ ಗೆ ತೆರಳಲಿದ್ದಾರೆ. ಸಿಂಪಲ್ ಮದುವೆಗೆ ಜೋಡಿ ಸುಮಾರು 10 ಕೋಟಿ ಖರ್ಚು ಮಾಡಲಿದೆ ಎಂದು ಮೂಲಗಳು ಹೇಳಿವೆ.
Comments