ಸ್ಪರ್ಶ ರೇಖಾ ಜೊತೆ ಗಾಯಕ ರಾಜೇಶ್ ಕೃಷ್ಣನ್ ಮದುವೆಯಾಗ್ತಿದಾರಾ...?

ಈಗಾಗಲೇ ಮೂರು ಮದುವೆ ಆಗಿ ವಿಚ್ಛೇದನ ಪಡೆದಿರುವ ಗಾಯಕ ರಾಜೇಶ್ ಕೃಷ್ಣನ್ ಈಗ ನಾಲ್ಕನೇ ಮದುವೆಗೆ ಸಿದ್ಧತೆ ನಡೆಸಿದ್ದಾರಾ.? ರಾಜೇಶ್ ಕೃಷ್ಣನ್ ರವರನ್ನ ನಟಿ ರೇಖಾ ವಿವಾಹ ಆಗ್ತಾರಾ.? ಈ ಬಗ್ಗೆ ಸ್ವತಃ ನಟಿ ರೇಖಾ ಸ್ಪಷ್ಟನೆ ನೀಡಿದ್ದಾರೆ.
ಸ್ಪರ್ಶ ಖ್ಯಾತಿಯ ನಟಿ ರೇಖಾ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಮದುವೆ ಆಗುವ ಮನಸ್ಸು ಮಾಡಿದ್ದಾರಂತೆ ಎಂಬ ಗುಸು ಗುಸು ಕಳೆದ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇತ್ತು. ಮದುವೆ ಆದ್ಮೇಲೆ ಜೊತೆಗಿರಲು ನಟಿ ರೇಖಾ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಹೊಸ ಮನೆಯ ಹುಡುಕಾಟದಲ್ಲಿದ್ದಾರಂತೆ ಎಂಬ ಅಂತೆ-ಕಂತೆಯೂ ಸ್ಯಾಂಡಲ್ ವುಡ್ ಮಂದಿಯ ಕಿವಿಗೆ ಬಿದ್ದಿತ್ತು.ಇಷ್ಟು ದಿನ ಗುಸು ಗುಸು ಆಗಿ ಕೇಳಿ ಬರುತ್ತಿದ್ದ ಈ ಸುದ್ದಿ ಇಂದು ಬ್ರೇಕಿಂಗ್ ನ್ಯೂಸ್ ಆದ್ಮೇಲೆ 'ಸ್ಪರ್ಶ' ರೇಖಾ ಸ್ಪಷ್ಟನೆ ನೀಡಿದ್ದಾರೆ. ''ಇದೆಲ್ಲ ಸುಳ್ಳು ಸುದ್ದಿ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾನು ಹಾಗೂ ರಾಜೇಶ್ ಕೃಷ್ಣನ್ ಒಳ್ಳೆಯ ಫ್ರೆಂಡ್ಸ್ ಅಷ್ಟೆ. ಯಾರು ಯಾಕೆ ಹೀಗೆ ಸುದ್ದಿ ಹಬ್ಬಿಸುತ್ತಿದ್ದಾರೋ, ನನಗಂತೂ ಗೊತ್ತಿಲ್ಲ'' ಎಂದು ನಟಿ ರೇಖಾ ಸ್ಪಷ್ಟ ಪಡಿಸಿದ್ದಾರೆ.
Comments