ಗೂಗಲ್ ಸಿನಿಮಾ ಆಡಿಯೋ ರಿಲೀಸ್ ಮಾಡಿದ ಅಂಬರೀಷ್

ಗೂಗಲ್ ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಕಥೆ ಅಲ್ಲದೆ, ಚಿತ್ರಕಥೆ, ಸಂಬಾಷಣೆ, ಗೀತಾ ಸಾಹಿತ್ಯ, ಸಂಗೀತ, ನಿರ್ಮಾಣ ಹಾಗೂ ನಿರ್ದೇಶನ ಸಹ ಮಾಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಅನೇಕ ಸಿನಿಮಾ ಸಂಬಂಧ ಕೆಲಸಗಳಲ್ಲಿ ದುಡಿದು ಹೆಸರು ಸಂಪಾಧಿಸಿ ಬೆಳೆದಿದ್ದಾರೆ ಎಂದು ಅಂಬರೀಶ್ ಅವರು ಶ್ಲಾಘಿಸಿದ್ದಾರೆ.
ಡಾ. ವಿ ನಾಗೇಂದ್ರ ಪ್ರಸಾದ್ ಅವರ ಬಹುನಿರೀಕ್ಷಿತ ಚಿತ್ರದ ಹಾಡುಗಳನ್ನು ನಟ ಡಾ. ಅಂಬರೀಶ್ ಬಿಡುಗಡೆ ಮಾಡಿದರು. ನಾದ ಬ್ರಹ್ಮ ಹಂಸಲೇಖ ತಾವು ಡಾ. ರಾಜಕುಮಾರ್ ಹಾಗೂ ಇಳಯರಾಜ ಅವರಿಂದ ಸರಳತೆಯನ್ನು ಕಲಿತಿದ್ದು ಎಂದು ಹೇಳಿಕೊಳ್ಳುತ್ತಾ ನಾಗೇಂದ್ರ ಪ್ರಸಾದ್ ಅವರು ಸುದೀಪ್, ದರ್ಶನ್, ಪುನೀತ್ ಅವರಂತೆ ಆಗುವುದು ಬೇಡ. ಅವರು ಪೆನ್ನಿಗೆ ಹೆಚ್ಚು ಕೆಲಸಗಳನ್ನು ಕೊಡಲಿ ಎಂದು ಹಂಬಲಿಸಿದರು.
Comments