ಸ್ಯಾಂಡಲ್ ವುಡ್ ಗೆ ನಟಿ ಶ್ರುತಿ ಹಾಸನ್ ಎಂಟ್ರಿ..!!

ಸ್ಯಾಂಡಲ್ ವುಡ್ ಗೆ ಶ್ರುತಿ ಹಾಸನ್ ಎಂಟ್ರಿಕೊಡಲಿದ್ದು, ಪಿ.ಸಿ. ಶೇಖರ್ ನಿರ್ದೇಶಿಸಲಿರುವ ಐತಿಹಾಸಿಕ ಕಥಾ ಹಂದರದ ಚಿತ್ರಕ್ಕೆ ಶ್ರುತಿ ನಾಯಕಿಯಾಗುವ ಸಾಧ್ಯತೆಗಳಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಶೇಖರ್, ಈಗಾಗಲೇ ಒಂದು ಬಾರಿ ಶ್ರುತಿ ಅವರನ್ನು ಅಪ್ರೋಚ್ ಮಾಡಿದ್ದೇವೆ. ಆದರೆ ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಇನ್ನೂ ಒಂದೆರಡು ಮೀಟಿಂಗ್ ಆಗುವುದು ಬಾಕಿಯಿದೆ. ಆ ನಂತರವೇ ಅವರು ನಟಿಸುತ್ತಾರೋ ಇಲ್ಲವೊ ಎಂಬುದು ಅಧಿಕೃತ ಆಗಲಿದೆ.
ಅಂದಹಾಗೆ, ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಶೇಖರ್ ಮಾತ್ರವಲ್ಲ, ಮತ್ತೋರ್ವ ನಿರ್ದೇಶಕ ನಂದಕಿಶೋರ್ ಕೂಡ ಶ್ರುತಿ ಅವರನ್ನು ಚಂದನವನಕ್ಕೆ ಕರೆದುಕೊಂಡು ಬರುವ ಪ್ರಯತ್ನದಲ್ಲಿ ಇದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
Comments