ಪ್ರಭಾಸ್ -ಅನುಷ್ಕಾ ಶೆಟ್ಟಿ ಡಿಸೆಂಬರ್ ನಲ್ಲಿ ಎಂಗೇಜ್ ಮೆಂಟ್ ?

ಹೈದ್ರಾಬಾದ್: ಟಾಲಿವುಡ್ ಜನ ಮೆಚ್ಚಿದ ಜೋಡಿ ಎಂತಲೇ ಖ್ಯಾತಿ ಗಳಿಸಿರೋ ನಟ ಪ್ರಭಾಸ್ ಹಾಗೂ ಅನುಷ್ಕಾ ಶರ್ಮಾ ಕುರಿತು ಬ್ರೇಕಿಂಗ್ ನ್ಯೂಸ್ ಬಾಲಿವುಡ್ ನಿಂದ ಬಂದಿದೆ. ಪ್ರಭಾಸ್ ಕನ್ನಡದ ಅಳಿಯನಾಗ್ತಾರಾ? ಎಂದು ಹಬ್ಬಿರುವ ಸುದ್ದಿ.
ಎಲ್ಲೆಡೆ ಹಾಟ್ ಟಾಪಿಕ್ ಆಗಿದ್ದ ಪ್ರಭಾಸ್ - ಅನುಷ್ಕಾ ಮದುವೆ ವಿಷ್ಯ ಬಂದಾಗಲೆಲ್ಲಾ ಪ್ರಭಾಸ್ ಅನುಷ್ಕಾ ಶೆಟ್ಟಿ ಮದುವೆ ವಿಷಯಗಳು ಹರಿದಾಡುತ್ತಿದ್ದವು. ನಾವಿಬ್ಬರು ಉತ್ತಮ ಫ್ರೆಂಡ್ಸ್ ಎಂದು ಹೇಳುತ್ತಿದ್ದ ಇಬ್ಬರು, ಇದೆಲ್ಲಾ ರೂಮರ್ಸ್ ಅಂತ ಹೇಳಿದ್ದರು. ಬಾಲಿವುಡ್ ನ ಸಿನಿಮಾ ವಿಮರ್ಶಕ ಉಮೈರ್ ಸಂಧು ಟ್ವಿಟರ್ ಮೂಲಕ ಇವರಿಬ್ಬರು ಪ್ರೀತಿಯ ವಿಷಯವನ್ನು ರಟ್ಟು ಮಾಡಿದ್ದಾರೆ.
ಬಾಹುಬಲಿ ಫ್ಯಾನ್ಸ್ ಗೆ ಬ್ರೇಕಿಂಗ್ ನ್ಯೂಸ್ ಎಂದಿರುವ ಅವರು, ಪ್ರಭಾಸ್ ಮತ್ತು ಅನುಷ್ಕಾ ಡಿಸೆಂಬರ್ ನಲ್ಲಿ ಎಂಗೇಜ್ ಆಗುತ್ತಿದ್ದಾರೆ. ಅವರಿಬ್ಬರು ಅಫೀಶಿಯಲ್ ಆಗಿ ರಿಲೇಷನ್ ಶಿಪ್ ನಲ್ಲಿದ್ದಾರೆ, ಅವರಿಬ್ಬರು ಫ್ರೆಂಡ್, ಲವ್ ವಿಷ್ಯವನ್ನು ನನ್ನ ಬಳಿ ಹೇಳಿದ್ದಾರೆ. ಆದರೆ ಅನುಷ್ಕಾ - ಪ್ರಭಾಸ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Comments