ಪರಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ನಂ 1 ಸ್ಥಾನಕ್ಕೇರಿದ 'ತಾರಕ್' !!

ಸರಿಯಾಗಿ ಇದ್ದರೇ ಒಂದು ಸಿನಿಮಾ ಯಾವ ಮಟ್ಟಕ್ಕೆ ಬೇಕಾದರೂ ಗೆಲುವು ಸಾಧಿಸಿ ಬಿಡಬಹುದು. ಈಗ ಆ ರೀತಿ ಗೆಲುವು ಕಂಡಿರುವ ಸಿನಿಮಾ ಅಂದರೆ 'ತಾರಕ್'.
ಕೋಟಿ ಕೋಟಿ ಕಲೆಕ್ಷನ್ ಜೊತೆಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಸಿನಿಮಾ ಈಗ ದರ್ಶನ್ ಅವರ ಇಮೇಜ್ ಮತ್ತಷ್ಟು ಜಾಸ್ತಿಯಾಗುವಂತೆ ಮಾಡಿದೆ. ಜೊತೆಗೆ 'ತಾರಕ್' ಈಗ ಪರಭಾಷೆಯ ದೊಡ್ಡ ಸಿನಿಮಾಗಳಿಗೆ ಪೈಪೋಟಿ ನೀಡಿ ನಂ 1 ಸ್ಥಾನಕ್ಕೆ ಏರಿದೆ.
ಸದ್ಯ ಬುಕ್ ಮೈ ಶೋ ರೇಟಿಂಗ್ ನಲ್ಲಿ ದರ್ಶನ್ ಅವರ 'ತಾರಕ್' ಸಿನಿಮಾ 83% ಪಡೆದು ನಂ1 ಆಗಿ ಅಗ್ರ ಸ್ಥಾನದಲ್ಲಿದೆ.ಸಿನಿಮಾ ಗೆದ್ದಿರುವ ಹಿನ್ನಲೆಯಲ್ಲಿ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
''ನಿಮ್ಮ ಪ್ರೀತಿ - ಅಭಿಮಾನ - ಪ್ರೋತ್ಸಾಹಕ್ಕೆ ಈ ನಿಮ್ಮ ದಾಸ ಯಾವಾಗ್ಲೂ ಚಿರಋಣಿ. ತಾರಕ್ ರಾಮ್, ಎಲ್ಲರೂ ಪ್ರೀತಿಯಿಂದ ‘ತಾರಕ್' ಅಂತ ಕರೀತಾರೆ'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
'ತಾರಕ್' ಮೊದಲ ದಿನ ಬರೋಬ್ಬರಿ 8.5 ಕೋಟಿ ಗಳಿಸಿದ್ದು, ಮೊದಲ ಮೂರು ದಿನದಲ್ಲಿ 25 ರಿಂದ 30 ಕೋಟಿವರೆಗೂ ಗಳಿಸಿದೆ ಎಂದು ಅಂದಾಜಿಸಲಾಗಿದೆ.
Comments